ಹುಬ್ಬಳ್ಳಿಗೆ ಟಿಬೇಟಿಯನ್ ಧರ್ಮಗುರು ದಲೈಲಾಮಾ ಆಗಮನ…

193
firstsuddi

ಹುಬ್ಬಳ್ಳಿ : ಟಿಬೇಟಿಯನ್ ಧರ್ಮಗುರು ದಲೈಲಾಮಾ ಅವರು ವಾಣಿಜ್ಯನಗರಿ ಹುಬ್ಬಳ್ಳಿಗೆ ಆಗಮಿಸಿದ್ದಾರೆ. ಗೋವಾದಿಂದ ಖಾಸಗಿ ವಿಮಾನದ ಮೂಲಕ ಆಗಮಿಸಿದ ದಲೈಲಾಮಾ ಅವರನ್ನು ಧಾರವಾಡ ಜಿಲಾಧಿಕಾರಿ ದೀಪಾ ಚೋಳನ್ ಅವರು ಹೂಗುಚ್ಚ ನೀಡಿ ಸ್ವಾಗತಿಸಿದರು. ಇಂದಿನಿಂದ ಡಿ.24ರವೆಗೆರೆ ಮುಂಡಗೋಡದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ದಲೈಲಾಮಾ ಅವರು ಸೇರಿದಂತೆ ತಮ್ಮ 12ಮಂದಿ ಧಾರ್ಮಿಕ ಅನುಚರರು ಭಾಗವಹಿಸಲಿದ್ದಾರೆ. ಹೀಗಾಗಿ ದಲೈಲಾಮಾ ಅವರು ವಾಣಿಜ್ಯ ನಗರಿ ಹುಬ್ಬಳ್ಳಿಗೆ ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಆರ್.ದಿಲೀಪ್, ಡಿಸಿಪಿ ನಾಗೇಶ್, ಉಪವಿಭಾಗಾಧಿಕಾರಿ ಮಹಮದ್ ಜುಬೇರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.