ನೆರೆ ಪರಿಹಾರದ ಬಗ್ಗೆ ಯಾವ ಪಕ್ಷದವರು ಗೊಂದಲ ಉಂಟುಮಾಡುವ ಅಗತ್ಯವಿಲ್ಲ : ಬಿ.ಎಸ್. ಯಡಿಯೂರಪ್ಪ.

325
firstsuddi

ಮೈಸೂರು : ನೆರೆ ಪರಿಹಾರದ ಬಗ್ಗೆ ಯಾವ ಪಕ್ಷದವರು ಗೊಂದಲ ಮಾಡಿಕೊಳ್ಳುವ ಅಗತ್ಯವಿಲ್ಲ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಯಾವ ರಾಜ್ಯಕ್ಕೂ ಈವರೆಗೂ ನೆರೆ ಪರಿಹಾರ ಬಿಡುಗಡೆ ಮಾಡಿಲ್ಲ. ಪ್ರಧಾನಿ ಮೋದಿಯವರು ಈಗಾ ತಾನೆ ದೇಶಕ್ಕೆ ವಾಪಸ್ಸಾಗಿದ್ದಾರೆ. ಇನ್ನೆರಡು ದಿನದಲ್ಲಿ ಪರಿಹಾರ ಬಿಡುಗಡೆಯಾಗುತ್ತದೆ. ಈ ಬಗ್ಗೆ ಯಾವ ಪಕ್ಷದವರು ಗೊಂದಲ ಉಂಟು ಮಾಡುವ ಅಗತ್ಯವಿಲ್ಲ. ಯಾರೂ ಕೂಡಾ ದೆಹಲಿಗೆ ಹೋಗಬೇಕಾಗಿಲ್ಲ. ಪ್ರಧಾನಿ ಮೋದಿಯವರು ಬುದ್ದಿವಂತರಾಗಿದ್ದು, ಅವರಿಗೆ ಎಲ್ಲಾ ರಾಜ್ಯದ ಪರಿಸ್ಥಿತಿ ಹೇಗಿದೆ ಎಂಬುವುದು ಗೊತ್ತಿದೆ. ಶೀಗ್ರದಲ್ಲೇ ಪರಿಹಾರ ಘೊಷಣೆ ಮಾಡುತ್ತಾರೆ ಎಂದರು. ಈ ವೇಳೆ ಫೋನ್ ಕದ್ದಾಲಿಕೆ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದು, ಯಾರ ಯಾರ ಫೋನ್ ಕದ್ದಾಲಿಕೆ ಆಗಿದೆ ಎಂಬುವುದರ ಬಗ್ಗೆ ನನಗೆ ಮಾಹಿತಿ ಇಲ್ಲ. ಯಾರ ಫೋನ್ ಕದ್ದಾಲಿಕೆ ಆಗಿದ್ದರೂ ಸತ್ಯ ಹೊರಗೆ ಬರುತ್ತದೆ. ಸಿಬಿಐ ತನಿಖೆಯ ಸಂಪೂರ್ಣ ವರದಿ ಬಂದ ಬಳಿಕ ಇದರ ಬಗ್ಗೆ ಮಾತನಾಡತ್ತೇನೆ. ಶುತ್ತೂರು ಶ್ರೀಗಳ ಫೋನ್ ಕದ್ದಾಲಿಕೆ ಆಗಿರುವ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು.