ವೈರಲ್ ಸೋಂಕುಗಳಲ್ಲಿ ಅತ್ಯಂತ ಅಪಾಯಕಾರಿಯಾದದ್ದು ಡೆಂಗ್ಯೂ, ಮಹಾಮಾರಿ ಡೆಂಗ್ಯೂ ಜ್ವರ ರಾಜ್ಯದ ಹಲವು ಭಾಗಗಳಲ್ಲಿ ವ್ಯಾಪಿಸಿದ್ದು, ಜನರು ಸೊಳ್ಳೆಯನ್ನು ನೋಡಿದರೆ ಹೆದರುವ ಪರಿಸ್ಥಿತಿ ಸೃಷ್ಟಿಯಾಗಿದೆ.
ಏಡೀಸ್ ಈಜಿಪ್ಟಿ ಎಂಬ ಸೊಳ್ಳೆ ಕಡಿಯುವುದರಿಂದ ಈ ವೈರಸ್ ಹರಡುತ್ತದೆ. ಈ ಸೊಳ್ಳೆಗಳು ಸಾಮಾನ್ಯವಾಗಿ ಹಗಲು ಹೊತ್ತು ಕಚ್ಚುತ್ತವೆ. ಈ ಸೊಳ್ಳೆಗಳು ಕಚ್ಚಿದ ಎರಡರಿಂದ ಏಳು ದಿನಗಳಲ್ಲಿ ಡೆಂಗ್ಯೂ ಜ್ವರದ ಲಕ್ಷಣಗಳು ಕಾಣಿಸುತ್ತದೆ. ಈ ಅಪಾಯಕಾರಿ ವೈರಸ್ ಒಬ್ಬರಿಂದ ಇನ್ನೊಬ್ಬರಿಗೆ ವೇಗವಾಗಿ ಹರಡುತ್ತದೆ. ಡೆಂಗ್ಯೂವಿನ ಪ್ರಮುಖ ಲಕ್ಷಣಗಳನ್ನು ಈ ಕೆಳಕಂಡಂತೆ ಕಾಣಬಹುದಾಗಿದೆ. ಹಾಗೂ ತಡೆಯುವ ಹಲವು ಮುಂಜಾಗೃತ ಕ್ರಮಗಳನ್ನು ವಿವರಿಸಲಾಗಿದೆ.
ಲಕ್ಷಣಗಳು:
• ವಿಪರೀತ ಜ್ವರ
• ತಲೆನೋವು
• ಮೈ ಕೈ ನೋವು
• ಚರ್ಮದ ಮೇಲೆ ಗುಳ್ಳೆಗಳಾಗುವುದು
• ಕಣ್ಣು ಹಿಂಭಾಗದಲ್ಲಿ ನೋವು
• ತಲೆ ಸುತ್ತುವುದು
• ಹಸಿವಾಗದೆ ಇರುವುದು
• ವಾಂತಿ ಆಗುವುದು
• ಸುಸ್ತಾಗುವುದು
• ಸ್ನಾಯುಗಳು, ಕೀಲುಗಳ ನೋವು
• ಪ್ಲೇಟ್ಲೆಟ್ಟ್ ಕಡಿಮೆಯಾಗುವುದು
• ಹೊಟ್ಟೆ ನೋವಾಗುವುದು
ಮುನ್ನೆಚ್ಚರಿಕೆ ಕ್ರಮಗಳು:
• ನೀರು ಮನೆಯ ಸುತ್ತ ಮುತ್ತ ಎಲ್ಲೂ ನಿಲ್ಲದಂತೆ ಮುನ್ನೆಚ್ಚರಿಕೆ ವಹಿಸುವುದು.
• ಬೇವಿನ ಸೊಪ್ಪಿನ ಹೊಗೆ ಹಾಕುವ ಮೂಲಕ ಸೊಳ್ಳೆಗಳನ್ನು ನಿಯಂತ್ರಿಸಬಹುದು.
• ಜ್ವರ ಬಂದಾಗ ನಿರ್ಲಕ್ಷಿಸದೆ ವೈದ್ಯರ ಸಲಹೆ ಮೇರೆಗೆ ರಕ್ತ ಪರೀಕ್ಷೆ ಮಾಡಿಸಬೇಕು.
• ಸೊಳ್ಳೆ ಕಚ್ಚದಂತೆ ಪೂರ್ತಿ ತೋಳಿನ ಬಟ್ಟೆ ಧರಿಸಬೇಕು.
• ಟೈರ್‍ಗಳು, ಹೂವಿನ ಕುಂಡಗಳು, ಒಡೆದ ಬಾಟಲಿ, ಎಳನೀರಿನ ಚಿಪ್ಪು ಕಸದ ಡಬ್ಬಿಗಳು, ಸೇರಿದಂತೆ ಮುಂತಾದವುಗಳಲ್ಲಿ ನೀರು ಶೇಖರಣೆಯಾಗದಂತೆ ಎಚ್ಚರಿಕೆ ವಹಿಸುವುದು.
• ಸೊಳ್ಳೆ ಕಚ್ಚದಂತೆ ಕ್ರೀಮ್, ಆಯಿಲ್ ಹಚ್ಚಿಕೊಳ್ಳುವುದು ಉತ್ತಮ.
• ಹಗಲು ಹೊತ್ತಿನಲ್ಲಿ ಸೊಳ್ಳೆಗಳಿಂದ ಕಚ್ಚಿಸಿಕೊಳ್ಳಬಾರದು.










