ಮೂಡಿಗೆರೆ : ಮದುವೆಗೆ ಮನೆಯವರ ವಿರೋಧ ಹಿನ್ನೆಲೆ, ಪ್ರೇಮಿಗಳು ಆತ್ಮಹತ್ಯೆ…

4349
firstsuddi

ಮೂಡಿಗೆರೆ : ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಪ್ರೇಮಿಗಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲ್ಲೂಕಿನಲ್ಲಿ ನಡೆದಿದೆ. ಕೊಟ್ಟಿಗೆಹಾರ ವಾಸಿ ಅಪೂರ್ವ(22) ಹಾಗೂ ಗೋಣಿಬೀಡು ವಾಸಿ ನೂತನ್(25), ಮೃತ ದುರ್ದೈವಿಗಳು ಎನ್ನಲಾಗಿದ್ದು, ಆರು ವರ್ಷಗಳಿಂದ ಪ್ರೀತಿಸುತ್ತಿದ್ದ ಮದುವೆಗೆ ಪೋಷಕರ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ, ಆತ್ಮಹತ್ಯೆ ಮಾಡಿಕೊಂಡಿದ್ದು, ನೂತನ್ ಒಕ್ಕಲಿಗ ಸಮುದಾಯಕ್ಕೆ ಸೇರಿದ್ದು, ಅಪೂರ್ವ ಬಿಲ್ಲವ ಜಾತಿಗೆ ಸೇರಿದ್ದರಿಂದ ಇಬ್ಬರು ಬೇರೆ ಬೇರೆ ಜಾತಿಯಾಗಿದ್ದ ಕಾರಣ ಹೆತ್ತವರು ಇವರ ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದರು. ನೂತನ್ ಅವರ ತಂದೆ ಸರ್ಕಾರಿ ಉದ್ಯೋಗದಲ್ಲಿದ್ದು, ಅನುಕೂಲಸ್ಥರಾಗಿದ್ದು, ಹತ್ತಾರು ಎಕರೆ ಕಾಫಿ ತೋಟವಿದ್ದು, ಆದರೆ ಅಪೂರ್ವ ಮಧ್ಯಮ ವರ್ಗದ ಕುಟುಂಬದವಳಾಗಿದ್ದು, ತಾಯಿ ಸರ್ಕಾರಿ ಶಾಲೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದು, ಇದರಿಂದ ಇಬ್ಬರ ಮದುವೆಗೆ ನೂತನ್ ಮನೆಯವರು ವಿರೋಧ ವ್ಯಕ್ತಪಡಿಸಿದ್ದರಿಂದ ಎರಡು ದಿನಗಳ ಹಿಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಕೂಡಲೇ ಅವರನ್ನು ಮೂಡಿಗೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದ ಕಾರಣ ಇಬ್ಬರು ಸಾವನ್ನಪ್ಪಿದ್ದು, ಪ್ರೇಮಿಗಳಿಬ್ಬರು ಸಾವಿನಲ್ಲೂ ಒಂದಾಗಿದ್ದಾರೆ. ಬಣಕಲ್ ಹಾಗೂ ಗೋಣಿಬೀಡು ಎರಡೂ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಅಡಿಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.