ನೇಣು ಬಿಗಿದ ಸ್ಥಿತಿಯಲ್ಲಿ ‘ಕಾಂಚನ 3’ ನಟಿ ಶವ ಪತ್ತೆ – ಸಾವಿನ ಸುತ್ತ ಅನುಮಾನದ ಹುತ್ತ!

82
firstsuddi

ಚೆನ್ನೈ : ಕಾಂಚನಾ-3 ಸಿನಿಮಾದಲ್ಲಿ ನಟಿಸಿದ್ದ ರಷ್ಯನ್ ನಟಿ ಅಲೆಕ್ಸಾಂಡ್ರಾ ಜಾವಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.

ರಷ್ಯಾದವರಾದ ಅಲೆಕ್ಸಾಂಡ್ರಾ ಉತ್ತರ ಗೋವಾದ ಪಟ್ಟಣವೊಂದರಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಆಕೆಯ ನೆರೆಹೊರೆ ಮನೆಯವರು ಸಾಯುವುದಕ್ಕೂ ಕೆಲವು ದಿನಗಳ ಹಿಂದೆ ಅಲೆಕ್ಸಾಂಡ್ರಾ ಬಾಯ್ ಫ್ರೆಂಡ್ ಅವರ ಮನೆಯಿಂದ ಹೊರಬಂದಿದ್ದನ್ನು ನೋಡಿದೇವು ಎಂದು ಹೇಳಿದ್ದಾರೆ. ಅಲೆಕ್ಸಾಂಡ್ರಾ ಖಿನ್ನತೆಗೊಳಗಾಗಿದ್ದರು ಎಂದು ಹೇಳಲಾಗುತ್ತಿದೆ. ಈಗ ಅಲೆಕ್ಸಾಂಡ್ರಾ ಮೃತದೇಹ ನೇಣು ಬಿಗಿದ ಸ್ಥಿಯಲ್ಲಿ ಪತ್ತೆ ಆಗಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಸಂಬಂಧಿಕರಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದ್ದು, ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಅಲ್ಲದೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇದೀಗ ತನಿಖೆ ಆರಂಭಿಸಿದ್ದಾರೆ.

ಕಾಲಿವುಡ್ ನಟ ರಾಘವ್ ಲಾರೆನ್ಸ್ ಜೊತೆ ಕಾಂಚನಾ-3 ಸಿನಿಮಾದಲ್ಲಿ ಅಲೆಕ್ಸಾಂಡ್ರಾ ನಟಿಸಿದ್ದರು. ಈ ಸಿನಿಮಾ ಕಾಲಿವುಡ್ ನಲ್ಲಿ ಉತ್ತಮ ಯಶಸ್ಸು ಕಂಡಿತ್ತು.