ಪಠಾಣ್ ಚಿತ್ರದಲ್ಲಿ ದೀಪಿಕಾ ಉಡುಗೆಗೆ ಪ್ರಮೋದ್ ಮುತಾಲಿಕ್ ಕಿಡಿ…

66
firstsuddi

ಧಾರವಾಡ : ಪಠಾಣ್ ಸಿನಿಮಾದ `ಬೇಷರಂ ರಂಗ್’ ಹಾಡಿನ ಮೇಲೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಗರಂ ಆಗಿದ್ದಾರೆ. ಇತ್ತೀಚೆಗೆ ರಿಲೀಸ್ ಆಗಿರುವ ಪಠಾಣ್ ಸಿನಿಮಾದ `ಬೇಷರಂ ರಂಗ್’ ಹಾಡಿನ ನೃತ್ಯ ಅಶ್ಲೀಲ ಹಾಗೂ ಅಸಭ್ಯವಾಗಿದೆ, ಇದು ನಾಚಿಗೇಡಾಗುವಂತಹದ್ದು ಎಂದು ಕಿಡಿ ಕಾರಿದ್ದಾರೆ.

ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ದೇಶಾದ್ಯಂತ ಪಠಾಣ್ ಸಿನಿಮಾ ಹಾಡಿಗೆ ಬೈಕಾಟ್ ಅಭಿಯಾನ ಆರಂಭಿಸಿದ್ದು, ಶ್ರೀರಾಮಸೇನೆ ಸಹ ಬೈಕಾಟ್ ಗೆ ಬೆಂಬಲ ವ್ಯಕ್ತಪಡಿಸಿದೆ. ಹಿಂದಿ ಚಿತ್ರರಂಗ ಮುಂಬೈನ ದಾವುದ್ ಕೈಯಲ್ಲಿದೆ. ಕಮ್ಯುನಿಸ್ಟರು ಹಾಗೂ ನಾಸ್ತಿಕವಾದಿಗಳ ಹಿಡಿತದಲ್ಲಿದೆ. ಇಲ್ಲಿವರೆಗೂ ಹಿಂದೂಗಳನ್ನೇ ಟಾರ್ಗೆಟ್ ಮಾಡಿ, ನಂಬಿಕೆಗಳನ್ನು ಕೆಡಿಸುವ ಪ್ರವೃತ್ತಿ ಬೆಳೆದುಬಂದಿದೆ. ಪಠಾಣ್ ಸಿನಿಮಾದಲ್ಲೂ ಕೇಸರಿ ಬಣ್ಣವನ್ನು ಟಾರ್ಗಟ್ ಮಾಡಿ ಬೇಷರಂ ರಂಗ್ ಹಾಡಿನಲ್ಲಿ ಈ ಬಣ್ಣ ತರಲಾಗಿದೆ. ಇದನ್ನು ನಾವು ವಿರೋಧಿಸುತ್ತೇವೆ ಎಂದು ಹೇಳಿದ್ದಾರೆ.

ಈ ರೀತಿಯ ಮಾನಸಿಕತೆಯ ಚಿತ್ರಗಳಿಂದಲೇ ಲಿವಿಂಗ್ ಟುಗೆದರ್, ಲವ್ ಜಿಹಾದ್, ರೇಪ್, ಕಿಡ್ನ್ಯಾಪ್ ಗಳು ಆಗುತ್ತದೆ. ಸೆನ್ಸಾರ್ ಮಂಡಳಿ ಇದನ್ನ ಗಂಭೀರವಾಗಿ ಪರಿಗಣಿಸಬೇಕು. ಸಮಾಜ ಹಾಳು ಮಾಡುವ ಇಂಥ ಚಲನಚಿತ್ರಗಳನ್ನ ಬ್ಯಾನ್ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.