ಮದ್ಯ ಸೇವಿಸುವವರು ಸಾಯ್ತಾರೆ : ನಿತೀಶ್ ಕುಮಾರ್.

59
firstsuddi

ಪಾಟ್ನಾ : ಮದ್ಯ ಸೇವಿಸುವವರು ಸಾಯ್ತಾರೆ. ಉದಾಹರಣೆ ನಮ್ಮ ಮುಂದೆಯೇ ಇದೆ ಎಂದು ಬಿಹಾರ ಸಿಎಂ ನಿತೀಶ್ ಕುಮಾರ್ ಹೇಳಿದರು.

ಬಿಹಾರದ ಛಾಪ್ರಾದಲ್ಲಿ ಕಳ್ಳಬಟ್ಟಿ ಸೇವಿಸಿ 30ಕ್ಕೂ ಹೆಚ್ಚು ಮಂದಿ ಬಲಿಯಾದ ಘಟನೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮದ್ಯ ಸೇವಿಸುವುದು ಕೆಟ್ಟದ್ದು, ಮದ್ಯ ಸೇವಿಸುವವರು ಸಾಯುತ್ತಾರೆ. ಜನರು ಎಚ್ಚರದಿಂದರಬೇಕು ಎಂದ ಅವರು, ಕಳ್ಳಬಟ್ಟಿಯಿಂದ ಸಾವನ್ನಪ್ಪಿದವರ ಕುಟುಂಬಗಳಿಗೆ ಪರಿಹಾರ ನೀಡುವುದಿಲ್ಲ ಎಂದು ತಿಳಿಸಿದರು.

ಮದ್ಯ ನಿಷೇಧವಿಲ್ಲದ ವಿವಿಧ ರಾಜ್ಯಗಳಲ್ಲೂ ನಕಲಿ ಮದ್ಯ ಸೇವಿಸಿ ಸಾವು-ನೋವುಗಳು ಸಂಭವಿಸುತ್ತಲೇ ಇವೆ. ಮದ್ಯಪಾನ ಕೆಟ್ಟ ಚಟ, ಅದನ್ನು ಸೇವಿಸಬಾರದು ಎಂದು ಹೇಳಿದರು.

ನಾವು ಕಟ್ಟುನಿಟ್ಟಿನ ಕ್ರಮವನ್ನು ತೆಗೆದುಕೊಂಡಿದ್ದೇವೆ, ಆದರೆ ಜನರು ಹೆಚ್ಚು ಜಾಗರೂಕರಾಗಿರಬೇಕು. ನಿಷೇಧವಿರುವಾಗ, ಮಾರಾಟವಾಗುವ ಮದ್ಯದಲ್ಲಿ ನಿಸ್ಸಂಶಯವಾಗಿ ಏನಾದರೂ ವಿಷವಸ್ತು ಇದ್ದೇ ಇರುತ್ತದೆ. ನೀವು ಎಂದಿಗೂ ಮದ್ಯ ಸೇವಿಸಬಾರದು. ಹೆಚ್ಚಿನ ಜನರು ನಿಷೇಧ ನೀತಿಯನ್ನು ಒಪ್ಪಿದ್ದಾರೆ. ಆದರೆ ಕೆಲವರು ತಪ್ಪು ಮಾಡುತ್ತಾರೆ ಎಂದು ಹೇಳಿದ್ದಾರೆ.

ಏಪ್ರಿಲ್ 2016ರಲ್ಲಿ ನಿತೀಶ್ ಕುಮಾರ್ ಸರ್ಕಾರವು ಬಿಹಾರದಲ್ಲಿ ಮದ್ಯ ಮಾರಾಟ ಮತ್ತು ಸೇವನೆಯನ್ನು ಸಂಪೂರ್ಣವಾಗಿ ನಿಷೇಧಿಸಿತು. ಆದರೆ ನಿಷೇಧವನ್ನು ಜಾರಿಗೊಳಿಸುವಲ್ಲಿ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ವಿಧಾನಸಭೆ ಮತ್ತು ಹೊರಗೆ ಬಿಜೆಪಿ ಪ್ರತಿಭಟನೆ ನಡೆಸಿತ್ತು.