ಪತ್ನಿಯನ್ನು ಕಳುಹಿಸದಿದ್ದಕ್ಕೆ ಅತ್ತೆ ಮೇಲೆ ಬ್ಲೇಡ್​​ನಿಂದ ಹಲ್ಲೆ ಮಾಡಿದ ಅಳಿಯ…

97
firstsuddi

ಹುಬ್ಬಳ್ಳಿ : ತವರು ಮನೆ ಸೇರಿರುವ ಹೆಂಡತಿಯನ್ನು ವಾಪಸ್ ಕಳುಹಿಸಲಿಲ್ಲ ಎಂಬ ಆಕ್ರೋಶದಿಂದ ಅಳಿಯನೊಬ್ಬ ಅತ್ತೆಯ ಮೇಲೆ ಬ್ಲೇಡ್ ನಿಂದ ಹಲ್ಲೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.

ನಗರದ ನವನಗರದ ನಿವಾಸಿ ಸೋಮವ್ವ ಮಲ್ಲಾಡ ಹಲ್ಲೆಗೊಳಗಾದವರು. ಪಡದಯ್ಯನ ಹಕ್ಕಲದ ರಮೇಶ ದೊಡ್ಡಮನಿ ಎಂಬಾತ ಅತ್ತೆ ಮೇಲೆ ಹಲ್ಲೆ ನಡೆಸಿದ ಆರೋಪಿ. ನಾಲೈದು ವರ್ಷಗಳ ಹಿಂದೆ ಪತಿ ರಮೇಶನೊಂದಿಗೆ ಜಗಳವಾಡಿ ಪತ್ನಿ ತವರು ಸೇರಿದ್ದರು. ಡಿಸೆಂಬರ್ 7ರಂದು ಪತ್ನಿ ಜೊತೆ ರಮೇಶ ಜಗಳ ತೆಗೆದು ಹಲ್ಲೆ ನಡೆಸಿದ್ದನು. ಈ ವೇಳೆ ಜಗಳ ಬಿಡಿಸಲು ಮುಂದಾಗಿದ್ದ ಅತ್ತೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ರಮೇಶ, ಬ್ಲೇಡ್ನಿಂದ ಹಲ್ಲೆ ಮಾಡಿ ಜೀವ ಬೆದರಿಕೆಯನ್ನೂ ಹಾಕಿದ್ದಾನೆ.

ಈ ಸಂಬಂಧ ಎಪಿಎಂಸಿ ನವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.