ಬೆಂಗಳೂರು : ಪತ್ನಿಯೊಂದಿಗಿನ ಅನೈತಿಕ ಸಂಬಂಧವನ್ನು ಪ್ರಶ್ನಿಸಿದ್ದಕ್ಕೆ ಆಕೆಯ ಪ್ರಿಯಕರ ಪತಿಯನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಆನೇಕಲ್ ತಾಲ್ಲೂಕಿನ ಶ್ರೀರಾಂಪುರದಲ್ಲಿ ನಡೆದಿದೆ. ರಮೇಶ್ ಮೃತ ದುರ್ದೈವಿ ಎನ್ನಲಾಗಿದ್ದು, ರಮೇಶ್ ಅವರ ಪತ್ನಿ ಮುನಿಯಪ್ಪ ಎಂಬುವವರೊಂದಿಗೆ ನಡುವೆ 2ವರ್ಷಗಳಿಂದ ಅನೈತಿಕ ಸಂಬಂಧ ಹೊಂದಿದ್ದು, ಈ ಕುರಿತು ರಮೇಶ್ ಹಾಗೂ ಅವರ ಪತ್ನಿ ನಡುವೆ ಪದೇ ಪದೇ ಜಗಳವಾಗುತ್ತಿತ್ತು. ಅಲ್ಲದೇ ಪತ್ನಿಯೊಂದಿಗೆ ಮುನಿಯಪ್ಪ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ರಮೇಶ್ ಅವರು ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದರು. ಅದೇ ದ್ವೇಷದಿಂದ ನಿನ್ನೆ ರಾತ್ರಿ ರಮೇಶ್ ಅವರು ಫೋನಿನಲ್ಲಿ ಮಾತನಾಡುತ್ತಾ ಹೋಗುತ್ತಿದ್ದ ವೇಳೆ ಮುನಿಯಪ್ಪ ಅವರು ರಮೇಶ್ ಅವರ ಮೇಲೆ ಗುಂಡನ್ನು ಹಾರಿಸಿ ಹತ್ಯೆ ಮಾಡಿದ್ದಾರೆ. ಘಟನೆ ಬಗ್ಗೆ ಮಾಹಿತಿಯನ್ನು ಪಡೆದ ಜಿಗಣಿ ಪೊಲೀಸರು ಆರೋಪಿಯನ್ನು ಬಂದೂಕು ಸಮೇತ ವಶಕ್ಕೆ ಪಡೆದಿದ್ದಾರೆ.










