ಪತ್ನಿ ಮನೆ ಬಿಟ್ಟು ಹೋಗಿದ್ದಕ್ಕೆ ಕೋಪಗೊಂಡು ತನ್ನ ಮರ್ಮಾಂಗವನ್ನೇ ಕತ್ತರಿಸಿಕೊಂಡ ಪತಿ…!

300
firstsuddi

ಚೆನ್ನೈ : ಪತ್ನಿ ಮನೆ ಬಿಟ್ಟು ಹೋಗಿದ್ದಕ್ಕೆ ಸಿಟ್ಟಿಗೆದ್ದ ಪತಿ ತನ್ನ ಮರ್ಮಾಂಗವನ್ನೇ ಕತ್ತರಿಸಿಕೊಂಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಬಾಬು(40) ಮರ್ಮಾಂಗವನ್ನ ಕತ್ತರಿಸಿಕೊಂಡ ವ್ಯಕ್ತಿ. ಬಾಬು ಹಾಗೂ ತನ್ನ ಪತ್ನಿ ದೇವಿ ದಂಪತಿಗೆ ಮದುವೆಯಾಗಿ ಬಹಳ ವರ್ಷ ಕಳೆದರೂ ಮಕ್ಕಳಿಲ್ಲ. ಹೀಗಾಗಿ ಪ್ರತಿನಿತ್ಯ ಬಾಬು ಅವರು ಮನೆಗೆ ಕುಡಿದು ಬಂದು ಪತ್ನಿಯೊಂದಿಗೆ ಜಗಳವಾಡುತ್ತಿದ್ದರು. ಪತಿಯ ಈ ಕಿರುಕುಳದಿಂದ ಬೇಸತ್ತ ಪತ್ನಿ ಮನೆ ಬಿಟ್ಟು ತನ್ನ ತವರು ಮನೆ ಸೇರಿಕೊಂಡಿದ್ದರು. ಆದರೆ ಮರುದಿನ ತನ್ನ ಪತಿಯೊಂದಿಗೆ ಹೊ ವರ್ಷ ಆಚರಿಸುವ ಆಸೆಯಿಂದ ಪುನಃ ಮನೆಗೆ ಮರಳಿದ್ದರು. ಆದರೆ ಹೊಸ ವರ್ಷದ ದಿನವೂ ಪತಿ ಮನೆಗೆ ಕುಡಿದು ಬಂದು ಪತ್ನಿಯೊಂದಿಗೆ ಜಗಳವಾಡಿದ್ದಾರೆ. ಹೀಗಾಗಿ ಪತಿ ಸರಿಹೋಗುವುದಿಲ್ಲ ಎಂದು ಪುನಃ ಮನೆ ಬಿಟ್ಟು ತನ್ನ ತವರು ಮನೆಗೆ ತೆರಳಿದ್ದಾರೆ. ಇದರಿಂದ ಕೋಪಗೊಂಡ ಪತಿ ಕುಡಿದ ಮತ್ತಿನಲ್ಲಿ ಅಡುಗೆ ಕೋಣೆಯಲ್ಲಿದ್ದ ಚಾಕುವಿನಿಂದ ತನ್ನ ಮರ್ಮಾಂಗವನ್ನೇ ಕತ್ತರಿಸಿಕೊಂಡಿದ್ದಾರೆ. ಈ ವೇಳೆ ತೀವ್ರ ನೋವಿನಿಂದ ನರಳಾಡುತ್ತಿದ್ದ ಆತನ ಕಿರುಚಾಟ ಕೇಳಿ ಅಕ್ಕ ಪಕ್ಕದ ಮನೆಯವರು ಬಂದು ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ಚಿಕಿತ್ಸೆ ಪಡೆಯುತ್ತಿರುವ ಬಾಬು ಅವರ ಸ್ಥಿತಿ ಗಂಭೀರವಾಗಿದೆ ವೈದ್ಯರು ತಿಳಿಸಿದ್ದಾರೆ.