ಉಳ್ಳಾಲ: ಯುವಕನೋರ್ವ ಉಳ್ಳಾಲ ನೇತ್ರಾವತಿ ಸೇತುವೆಯಿಂದ ಹಾರಿ ನಾಪತ್ತೆಯಾಗಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ. ನದಿಗೆ ಹಾರಿದರೆನ್ನಲಾದವರನ್ನು ಉಳ್ಳಾಲಬೈಲ್ ನಿವಾಸಿ ನವೀಶ್ ಕೊಟ್ಟಾರಿ (30) ಎಂದು ಗುರುತಿಸಲಾಗಿದೆ. ತೊಕ್ಕೊಟ್ಟಿನಲ್ಲಿ ಅಂಗಡಿ ಹೊಂದಿರುವ ಇವರು ಬೆಳಗ್ಗಿನ ಜಾವ ಮನೆಯಿಂದ ಹೊರಟವರು ನೇತ್ರಾವತಿ ನದಿ ಸೇತುವೆ ಬಳಿ ಬೈಕ್ ನಿಲ್ಲಿಸಿ ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು, ಇವರ ಬೈಕ್ ಸೇತುವೆಯ ಮೇಲೆ ನಿಲ್ಲಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿರುವ ಪೊಲೀಸರು ನವೀಶ್ ಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.










