ಬಾಗಲಕೋಟೆ : ಯುಕೆಪಿ ಯೋಜನೆ ಆಸ್ತಿ ಪರಿಹಾರ ವಿಚಾರಕ್ಕೆ ಆರಂಭವಾದ ಜಗಳ ತಮ್ಮನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಇಲ್ಲಿನ ನವನಗರದ ಸೆಕ್ಟರ್ ನಂಬರ್ 63ರಲ್ಲಿ ಘಟನೆ ನಡೆದಿದೆ. ವೀರೇಶ್ ಹಡಗಲಿಮಠ (24) ಮೃತ ದುರ್ದೈವಿ.
ಅಕ್ಕ ಮಧುಶ್ರೀಯನ್ನು ಬೆಳಗಾವಿಯ ಅವದೂತ ಎಂಬಾತನಿಗೆ ಮದುವೆ ಮಾಡಿಕೊಡಲಾಗಿತ್ತು. ಮುಳುಗಡೆ ಪರಿಹಾರ 30 ಲಕ್ಷ ರೂ. ಬಂದಿದ್ದು, ಅದರಲ್ಲಿ ನಮಗೂ ಪಾಲು ಕೊಡಬೇಕೆಂದು ಅಕ್ಕ ಮಧುಶ್ರೀ ಹಾಗೂ ವೀರೇಶ್ ಹಡಗಲಿಮಠ ನಡುವೆ ಮೇಲಿಂದ ಮೇಲೆ ಜಗಳ ನಡೆಯುತ್ತಿತ್ತು. ಆದರೆ ನಿನ್ನೆ ಸಂಜೆ ಇದೇ ವಿಚಾರಕ್ಕೆ ಜಗಳ ಆರಂಭವಾಗಿದ್ದು, ಬಾಮೈದುನನಿಗೆ ಬಾವ ಅವದೂತ ಹಾಗೂ ಸಹಚರರು ಸೇರಿ ಚಾಕುವಿನಿಂದ ಇರಿದಿದ್ದಾರೆ.
ಬಾಗಲಕೋಟೆಯ ನವನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ತನಿಖೆ ಕೈಗೊಂಡಿದ್ದಾರೆ.










