ಬೆಂಗಳೂರು : ಹೈದರಾಬಾದ್‍ನಲ್ಲಿ ಪಶುವೈದ್ಯೆ ಪ್ರಿಯಾಂಕ ರೆಡ್ಡಿ ಅವರ ಮೇಲಿನ ಸಾಮೂಹಿಕ ಅತ್ಯಾಚಾರವನ್ನು ಖಂಡಿಸಿ ನಟ ಜಗ್ಗೇಶ್ ಅವರು ತಮ್ಮ ಟ್ವಿಟರ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಎಂದು ನಮ್ಮ ದೇಶದಲ್ಲಿ ಇಂಥ ಹೇಯಕೃತ್ಯದ ರಾಕ್ಷಸರಿಗೆ ಸಾರ್ವಜನಿಕವಾಗಿ ಗಲ್ಲು ಶಿಕ್ಷೆ ಬರುತ್ತದೋ ಅಲ್ಲಿಯವರೆಗು ಇಂಥ ಕೃತ್ಯ ತಡೆಯಲಾಗದು! “ಹೆಣ್ಣು ಕುಲವೆ ಸಾರ್ವಜನಿಕವಾಗಿ ಒಬ್ಬಂಟಿ ಪ್ರಯಾಣ ಕ್ಷೇಮವಲ್ಲಾ ಕಂದಮ್ಮಗಳೆ ಎಚ್ಚರ” ಸಾಧ್ಯವಾದಷ್ಟು ನಿರ್ಜನ ಪ್ರದೇಶದಲ್ಲಿ ಒಂಟಿ ಸಂಚಾರ ಮಾಡದಿರಿ! ನಿಮ್ಮ ರಕ್ಷಣೆಗೆ ಆಧುನಿಕ ಅವಿಷ್ಕಾರ ಬಳಸಿ!ಹರಿಓಂ. ಎಂದು ಟ್ವೀಟ್ ಮಾಡಿದ್ದಾರೆ.










