ಪಾಕಿಸ್ತಾನದಲ್ಲಿ ಬಿದ್ದ ಭಾರತದ ಕ್ಷಿಪಣಿ – ರಾಜ್ಯಸಭೆಯಲ್ಲಿ ರಕ್ಷಣಾ ಸಚಿವರು ಏನು ಹೇಳಿದ್ರು?

71
firstsuddi

ನವದೆಹಲಿ : ಪಾಕಿಸ್ತಾನದ ನೆಲಕ್ಕೆ ಭಾರತದ ಕ್ಷಿಪಣಿ ಹಾರಿರುವ ಸಂಬಂಧ ರಾಜ್ಯಸಭೆಯಲ್ಲಿ ಇಂದು ವಿವರಣೆ ನೀಡಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ಮಾರ್ಚ್ 9ರಂದು ಭಾರತದ ಕ್ಷಿಪಣಿ ನಿರ್ವಹಣೆ ಮತ್ತು ತಪಾಸಣೆ ವೇಳೆ ಆಕಸ್ಮಿಕವಾಗಿ ಬಿಡುಗಡೆಯಾಗಿ, ಪಾಕಿಸ್ತಾನಕ್ಕೆ ಬಂದಿದೆ ಎಂದು ತಿಳಿಸಿದರು.

ಆಕಸ್ಮಿಕವಾಗಿ ಘಟನೆ ಸಂಭವಿಸಿದ್ದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ. ಸದ್ಯ ಈ ಅವಘಡದಿಂದ ಯಾವುದೇ ಹಾನಿ, ಪ್ರಾಣಾಪಾಯ ಸಂಭವಿಸಿಲ್ಲ ಎಂಬುದು ಸಮಾಧಾನದ ವಿಚಾರ. ಭಾರತ ಕ್ಷಿಪಣಿಯು ಪಾಕಿಸ್ತಾನದಲ್ಲಿ ಬಂದಿರುವ ಕುರಿತು ಈಗಾಗಲೇ ತನಿಖೆ ಪ್ರಾರಂಭಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.