ಪಾಕಿಸ್ತಾನದ ಯುದ್ದ ವಿಮಾನ ಪತನ, 17 ಮಂದಿ ಸಾವು…

234
firstsuddi

ಇಸ್ಲಮಾಬಾದ್ : ಪಾಕಿಸ್ತಾನದ ಸೇನಾ ಯುದ್ದ ವಿಮಾನ ಪತನಗೊಂಡು ಸಿಬ್ಬಂದಿಗಳು ಸೇರಿದಂತೆ 17 ಮಂದಿ ಮೃತಪಟ್ಟಿರುವ ಘಟನೆ ರಾವಲ್ಪಿಂಡಿಯ ಗ್ಯಾರಿಸನ್ ಬಳಿ ನಡೆದಿದ್ದು, ಇಂದು ಬೆಳಿಗ್ಗೆ ಯುದ್ದ ವಿಮಾನವು ತರಬೇತಿ ನಡೆಸುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಈ ಘಟನೆ ಸಂಭವಿಸಿದ್ದು, ವಿಮಾನದಲ್ಲಿದ್ದ 5ಮಂದಿ ಸಿಬ್ಬಂದಿಗಳು ಸೇರಿದಂತೆ 17ಮಂದಿ ಮೃತಪಟ್ಟಿದ್ದು, ಘಟನೆಯಲ್ಲಿ 12ಮಂದಿ ನಾಗರಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳಕ್ಕೆ ಪಾಕಿಸ್ತಾನ ಸೇನಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಸೇನಾ ಮೂಲಗಳಿಂದ ತಿಳಿದು ಬಂದಿದೆ.