ಪಾಕಿಸ್ತಾನ : ಅಪರಿಚಿತ ವ್ಯಕ್ತಿಗಳಿಂದ ಹಿಂದೂ ಪತ್ರಕರ್ತನ ಹತ್ಯೆ…

148
Firstsuddi

ಕರಾಚಿ : ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 31 ವರ್ಷದ ಹಿಂದೂ ಪತ್ರಕರ್ತನನ್ನು ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ ಕೊಂದಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಅಜಯ್ ಲಾಲ್ವಾನಿ ಹತ್ಯೆಯಾದ ಪತ್ರಕರ್ತ. ಸುಕ್ಕೂರ್ ನಗರದ ಕ್ಷೌರಿಕನ ಅಂಗಡಿಯಲ್ಲಿ ಕುಳಿತಿದ್ದಾಗ ಎರಡು ಬೈಕ್ಗಳಲ್ಲಿ ಬಂದ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಕೂಡಲೇ ಲಾಲ್ವಾನಿ ಅವರನ್ನು ಆಸ್ಪತ್ರೆಗೆ ದಾಖಲಿಸಿದರು ಯಾವುದೇ ಪ್ರಯೋಜನವಾಗಿಲ್ಲ. ಮೃತ ಪತ್ರಕರ್ತನ ತಂದೆ ದಿಲೀಪ್ ಕುಮಾರ್, ಯಾರ ಜೊತೆಗೂ ದ್ವೇಷ ಶತೃತ್ವ ಇರಲಿಲ್ಲ. ಕೊಲೆ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.

ಹತ್ಯೆಯನ್ನು ಖಂಡಿಸಿ ಅಮೆರಿಕ ಮೂಲದ ಸ್ವತಂತ್ರ ಸಂಘಟನೆ (ಸಿಪಿಜೆ) ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿದೆ. ಘಟನೆ ಸಂಬಂಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.