ಪಾನ ಮತ್ತ ವ್ಯಕ್ತಿಯಿಂದ ಮನೆಗೆ ಬೆಂಕಿ ; ಆರು ಜನರು ಬೆಂಕಿಗಾಹುತಿ…

136
firstsuddi

ಕೊಡಗು : ಪಾನಮತ್ತ ವ್ಯಕ್ತಿಯಿಂದ ಆರು ಜನರು ಬೆಂಕಿಗಾಹುತಿಯಾಗಿರುವ ಘಟನೆ ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಕಾನೂರು ಗ್ರಾಮದಲ್ಲಿ ನಡೆದಿದೆ. ಬೋಜ ಎಂಬಾತ ಕಂಠಪೂರ್ತಿ ಕುಡಿದು ಎರವರ ಮಂಜು ಎಂಬುವವರ ಮನೆಗೆ ಬೀಗ ಹಾಕಿ ಬೆಂಕಿ ಹಚ್ಚಿದ್ದಾನೆ. ಪರಿಣಾಮ ಮನೆಯೊಳಗೆ ಮಲಗಿದ್ದವರು ಬೆಂಕಿಗೆ ಆಹುತಿಯಾಗಿದ್ದಾರೆ.

ಬೇಬಿ(45), ಸೀತೆ(40), ವಿಶ್ವಾಸ್(6), ಪ್ರಾರ್ಥನಾ(6), ಪ್ರಕಾಶ್(7), ವಿಶ್ವಾಸ್(3) ಮೃತ ವ್ಯಕ್ತಿಗಳು. ಭಾಗ್ಯ(40), ಪಾಚೆ(60) ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂವರು ಮನೆಯಲ್ಲಿ ಸಜೀವ ದಹನವಾದರೇ, ಇನ್ನೂ ಮೂವರು ಮೈಸೂರಿನ ಕೆ.ಆರ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.