ಪಾರ್ಟಿ ಕಿಕ್‍ನಲ್ಲಿ ಬಾಲಿವುಡ್ ನಿರ್ಮಾಪಕಿಗೆ ವಿಸ್ಕಿ ಬಾಟಲ್‍ನಲ್ಲಿ ಹೊಡೆದ್ರಾ ನಟಿ ಸಂಜನಾ ಗಲ್ರಾನಿ…?

280
firstsuddi

ಬೆಂಗಳೂರು : ಸ್ಯಾಂಡಲ್ ವುಡ್ ನಟಿ ಸಂಜನಾ ಗಲ್ರಾನಿ ಅವರು ವಿವಾದದಲ್ಲಿ ಸಿಲುಕಿದ್ದು, ಬಾಲಿವುಡ್ ನಿರ್ಮಾಪಕಿ ವಂದನಾ ಜೈನ್ ಅವರಿಗೆ ವಿಸ್ಕಿ ಬಾಟಲಿಯಿಂದ ಹೊಡೆದಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿದ್ದಾರೆ. ನಗರದ ಸ್ಟಾರ್ ಹೋಟೆಲ್ ಒಂದರಲ್ಲಿ ನಟಿ ಸಂಜನಾ ಗಲ್ರಾನಿ ಹಾಗೂ ನಿರ್ಮಾಪಕಿ ವಂದನಾ ಜೈನ್ ಅವರು ಪಾರ್ಟಿ ನಡೆಸುತ್ತಿದ್ದ ವೇಳೆ ಇಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿದ್ದು, ಇಬ್ಬರ ನಡುವಿನ ಜಗಳ ತಾರಕಕ್ಕೇರಿ ಸಂಜನಾ ಅವರು ವಂದನಾ ಅವರಿಗೆ ಗ್ಲಾಸ್‍ನಿಂದ ಹೊಡೆದಿದ್ದು, ಈ ಕುರಿತು ವಂದನಾ ಅವರು ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ಸದ್ಯ ಸಂಜನಾ ಅವರು ರಾಜಿ ಮಾಡಿಕೊಂಡು ಪ್ರಕರಣವನ್ನು ಇತ್ಯರ್ಥ ಮಾಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.