ಹಾಸನ : ಆಭರಣ ಅಂಗಡಿಯಲ್ಲಿ ಓರ್ವ ವ್ಯಕ್ತಿ ಗ್ರಾಹಕನ ಸೋಗಿನಲ್ಲಿ ಬಂದು ಉಂಗುರ ಬದಲಿಸಿಟ್ಟಿರುವ ಘಟನೆ ಚನ್ನರಾಯಪಟ್ಟಣದ ನಕ್ಷತ್ರ ಜ್ಯೂಯಲರ್ಸ್‍ನಲ್ಲಿ ನಡೆದಿದೆ. ವ್ಯಕ್ತಿ ಚಿನ್ನದ ಉಂಗುರ ಖರೀದಿಸುವುದಾಗಿ ನೋಡುತ್ತಾ ಹಿತ್ತಾಳೆ ಉಂಗುರವನ್ನು ಬದಲಾಯಿಸಿದ್ದು, ಉಂಗುರು ಬದಲು ಮಾಡುವ ದೃಶ್ಯ ಸಿಸಿ ಟಿವಿ ಕ್ಯಾಮರದಲ್ಲಿ ಸೆರೆಯಾಗಿದೆ. ವಂಚಕನ ಈ ಕೃತ್ಯ ಕಂಡು ಆಭರಣ ಅಂಗಡಿ ಮಾಲೀಕನಿಗೆ ಶಾಕ್ ಆಗಿದ್ದು, ಚನ್ನರಾಯಪಟ್ಟಣ ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.









