ಬೆಂಗಳೂರು : ತೆರೆ ಮೇಲೆ ಮಿಂಚಿದ್ದ ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ಮಾನ್ಯಾ ನಾಯ್ಡು ಅವರು ಪಾರ್ಶ್ವವಾಯುವಿನಿಂದ ಬಳಲುತ್ತಿದ್ದಾರೆ. ಈ ಬಗ್ಗೆ ನಟಿ ಮಾನ್ಯಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಕಳೆದ ಮೂರು ವಾರಗಳಿಂದ ನೋವಿನಿಂದಾಗಿ ನನಗೆ ಕೂರಲು ಆಗುತ್ತಿಲ್ಲ, ನಡೆಯಲು ಆಗುತ್ತಿಲ್ಲ, ಮಲಗಲಾಗುತ್ತಿಲ್ಲ, ನಿಂತುಕೊಳ್ಳಲಾಗುತ್ತಿಲ್ಲ, ಆದರೆ ನಾನು ಆದಷ್ಟು ಬೇಗ ಹುಷಾರಾಗಲು ಪ್ರಯತ್ನಪಡುತ್ತಿದ್ದೇನೆ. ಈ ಜೀವನ ನೀಡಿದ್ದಕ್ಕಾಗಿ ದೇವರಿಗೆ ಸದಾ ಋಣಿಯಾಗಿರುತ್ತೇನೆ. ನನ್ನ ಕುಟುಂಬಸ್ಥರು, ಸ್ನೇಹಿತರು, ಅಭಿಮಾನಿಗಳು, ನನಗಾಗಿ ಪ್ರಾರ್ಥನೆ ಸಲ್ಲಿಸಿದವರೆಲ್ಲರಿಗೂ ಧನ್ಯವಾದಗಳು. ಜೀವನ ಸುಲಭವಲ್ಲ ಅನ್ನೋದನ್ನು ನೆನಪಿಡಿ. ಆದರೆ ಎಂದಿಗೂ ಹಿಂದೆ ಸರಿಯಬೇಡಿ ಎಂದು ತನಗಾಗಿರುವ ನೋವನ್ನು ಮಾನ್ಯಾ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಆಘಾತಕಾರಿ ವಿಚಾರವನ್ನು ಕೇಳಿದ ಅಭಿಮಾನಿಗಳು ಮಾನ್ಯಾ ನಾಯ್ಡು ಅವರಿಗೆ ಧೈರ್ಯ ತುಂಬುತ್ತಿದ್ದಾರೆ. ಆರೋಗ್ಯದ ಕುರಿತಾಗಿ ಗಮನ ಕೊಡುವಂತೆ ಸಲಹೆಯನ್ನು ನೀಡುತ್ತಿದ್ದಾರೆ.










