ಪಿಒಕೆ ಪ್ರಧಾನಿ ಸ್ಥಾನದಿಂದ ಸರ್ದಾರ್ ತನ್ವೀರ್ ಇಲ್ಯಾಸ್ ಅನರ್ಹ…

59
firstsuddi

ಮುಜಫರಾಬಾದ್ : ಪಾಕ್ ಆಕ್ರಮಿತ ಕಾಶ್ಮೀರದ ಪ್ರಧಾನಿ ಸರ್ದಾರ್ ತನ್ವೀರ್ ಇಲ್ಯಾಸ್ ಅವರನ್ನು ಪ್ರಧಾನಿ ಸ್ಥಾನದಿಂದ ಅನರ್ಹಗೊಳಿಸಲಾಗಿದೆ.

ಪಾಕ್ ಆಕ್ರಮಿತ ಕಾಶ್ಮೀರದ (ಎಜೆಕೆ) ಹೈಕೋರ್ಟ್ ಇಂದು ಪಾಕ್ ಆಕ್ರಮಿತ ಕಾಶ್ಮೀರದ ಪ್ರಧಾನಿ ಸರ್ದಾರ್ ತನ್ವೀರ್ ಇಲ್ಯಾಸ್ ಅವರು ನ್ಯಾಯಾಲಯದ ನಿಂದನೆ ಮಾಡಿದ್ದಾರೆ ಎಂದು ಅವರ ಪ್ರಧಾನಿ ಸ್ಥಾನದಿಂದ ಅಹರ್ನಗೊಳಿಸಿದೆ.

ಇಲ್ಯಾಸ್ ಅವರು ಹೇಳಿಕೆಯೊಂದರಲ್ಲಿ ಸುಪ್ರೀಂ ಕೋರ್ಟ್ ವಿರುದ್ಧ ಬೆದರಿಕೆ ಸಂದೇಶ ಬಳಸಿದ್ದಕ್ಕಾಗಿ ಹೈಕೋರ್ಟ್ ತೀರ್ಪು ನೀಡಿದೆ. ನ್ಯಾಯಾಧೀಶ ಸದಾಕತ್ ಹುಸೇನ್ ರಾಜಾ ಅವರ ನಿರ್ದೇಶನದ ಪೂರ್ಣ ಪೀಠವು ಪ್ರಕರಣದ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಪ್ರಧಾನಿ ಸಂಬಂಧಿತ ವಿಡಿಯೋಗಳನ್ನು ಪ್ರಸಾರ ಮಾಡಲಾಗಿತ್ತು.

ಪ್ರತಿಪಕ್ಷಗಳು ಚುನಾವಣೆಯನ್ನು ಬಹಿಷ್ಕರಿಸಿದ್ದರಿಂದ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ಹೊಸ ಪ್ರಧಾನಿಯಾಗಿ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ನ ಪ್ರಾದೇಶಿಕ ಅಧ್ಯಕ್ಷ ಸರ್ದಾರ್ ತನ್ವೀರ್ ಇಲ್ಯಾಸ್ ಆಯ್ಕೆಯಾಗಿದ್ದರು. ಇದೀಗ ನ್ಯಾಯಾಂಗ ನಿಂದನೆಗಾಗಿ ಅನರ್ಹಗೊಂಡ ಆಜಾದ್ ಜಮ್ಮು ಮತ್ತು ಕಾಶ್ಮೀರದ ಮೊದಲ ಪ್ರಧಾನಿಯಾಗಿದ್ದಾರೆ.