ಪುಂಡರ ಕಿರುಕುಳದಿಂದ ನೊಂದ ವಿದ್ಯಾರ್ಥಿನಿ ನೇಣಿಗೆ ಶರಣು!

66
firstsuddi

ಚಿತ್ರದುರ್ಗ : ಪುಂಡರ ಕಿರುಕುಳದಿಂದ ನೊಂದ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಶರನಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ರಾಧಿಕಾ(17) ನೇಣಿಗೆ ಶರಣಾದ ದುರ್ದೈವಿ. ಜಿಲ್ಲೆಯ ಹೊಸದುರ್ಗ ತಾಲೂಕಿನ ಶೀರನಕಟ್ಟೆ ಗ್ರಾಮದ ಮನೆಯಲ್ಲಿ ರಾಧಿಕಾ ನೇಣಿಗೆ ಶರಣಾಗಿದ್ದಾಳೆ.

ಜಿಲ್ಲೆಯ ಹೊಸದುರ್ಗ ತಾಲೂಕಿನ ಶೀರನಕಟ್ಟೆಯ ಮುದ್ದಪ್ಪ, ಸುದೀಪ್, ಕೋಟಿ, ಅಭಿ ವಿರುದ್ಧ ಕಿರುಕುಳದ ಆರೋಪ ಕೇಳಿಬಂದಿದೆ. ರಾಧಿಕಾ ಕಾಲೇಜಿಗೆ ಹೋಗುವಾಗ, ಬರುವಾಗ ಜಡೆ ಹಿಡಿದು ಎಳೆದು ಅಶ್ಲೀಲವಾಗಿ ಮಾತನಾಡಿ ಆರೋಪಿಗಳು ಕಿರುಕುಳ ನೀಡುತ್ತಿದ್ದರಂತೆ. ಈ ಬಗ್ಗೆ ತನ್ನ ಪೋಷಕರ ಬಳಿ ರಾಧಿಕಾ ಹೇಳಿಕೊಂಡಿದ್ದಳಂತೆ.

ಈ ಬಗ್ಗೆ ಮೃತ ಬಾಲಕಿಯ ಪೋಷಕರು ಹೊಸದುರ್ಗ ಠಾಣೆಗೆ ದೂರು ನೀಡಿದ್ದಾರೆ. ಅಲ್ಲದೆ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಪೋಷಕರು ಪ್ರತಿಭಟನೆ ನಡೆಸಿದ್ದಾರೆ.