ವಾಷಿಂಗ್ಟನ್ : ಕೋವಿಡ್ ರೂಪಾಂತರಿ ಓಮಿಕ್ರಾನ್ಗೆ ಅಮೆರಿಕಾದಲ್ಲಿ ಮೊದಲ ಬಲಿಯಾಗಿದೆ. ಈ ಮೂಲಕ ಓಮಿಕ್ರಾನ್ಗೆ ವಿಶ್ವದಲ್ಲಿ ಎರಡನೇ ಸಾವು ಸಂಭವಿಸಿದೆ.
ಅಮೆರಿಕದ ಟೆಕ್ಸಾಸ್ ನಲ್ಲಿ 50 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದು, ಈ ವ್ಯಕ್ತಿ ಹಿಂದೆ ಕೋವಿಡ್-19 ಸೋಂಕಿತನಾಗಿದ್ದ ಮತ್ತು ವ್ಯಾಕ್ಸಿನ್ ಸಹ ಪಡೆದಿರಲಿಲ್ಲ ಎಂಬ ಮಾಹಿತಿ ಹ್ಯಾರಿಸ್ ಸಾರ್ವಜನಿಕ ಆರೋಗ್ಯ ಇಲಾಖೆಯಿಂದ ಮಾಹಿತಿ ಸಿಕ್ಕಿದೆ.
50 ವರ್ಷದ ವ್ಯಕ್ತಿ ಓಮಿಕ್ರಾನ್ನಿಂದ ಮೃತಪಟ್ಟಿರುವುದಾಗಿ ಇಲ್ಲಿನ ಕೌಂಟಿ ಜಡ್ಜ್ ಲಿನಾ ಹಿಡಾಲ್ಗೊ ಬಹಿರಂಗಪಡಿಸಿದ್ದಾರೆ.
ಅಮೆರಿಕದಲ್ಲಿ ಓಮಿಕ್ರಾನ್ ಹೆಚ್ಚುತ್ತಿರುವ ಬೆನ್ನಲ್ಲೇ ಅಧ್ಯಕ್ಷ ಜೋ ಬೈಡನ್ ಜನರಿಗೆ ಎಚ್ಚರಿಕೆ ನೀಡಿದ್ದಾರೆ. ನಾವೆಲ್ಲರೂ ಎಚ್ಚರಿಕೆಯಿಂದ ಇರಬೇಕು. ಕೊವಿಡ್ 19 ವಿರುದ್ಧ ಮುಂಚೂಣಿಯಲ್ಲಿ ನಿಂತು ಹೋರಾಟ ಮಾಡಿದವರಿಗೆ, ಅವರ ತ್ಯಾಗಕ್ಕೆ ನಾನು ಕೃತಜ್ಞನಾಗಿರುತ್ತೇನೆ. ಈ ಎರಡು ವರ್ಷಗಳ ಕಠಿಣ ಸಮಯದಲ್ಲಿ ನಿಮ್ಮ ಶ್ರಮವನ್ನೆಂದೂ ಮರೆಯಲಾಗದು. ಆ ಋಣ ನಮ್ಮ ಮೇಲೆ ಇದೆ. ಇನ್ನೂ ಕೂಡ ಹೋರಾಟ ಮುಂದುವರಿಯಲಿದೆ. ಜನರು ಸರಿಯಾಗಿ ಮಾಸ್ಕ್ ಧರಿಸಬೇಕು. ವ್ಯಾಕ್ಸಿನ್ ಹಾಕಿಸಿಕೊಳ್ಳಬೇಕು ಎಂದು ಬೈಡನ್ ಹೇಳಿದ್ದಾರೆ.










