ಪುನೀತ್ ಪುತ್ಥಳಿಗೆ ಮುತ್ತಿಟ್ಟು ಭಾವುಕರಾದ ರಾಘವೇಂದ್ರ ರಾಜ್‍ಕುಮಾರ್.

86
firstsuddi

ಬೆಂಗಳೂರು : ನಟ ಪುನೀತ್ ರಾಜ್ ಕುಮಾರ್ ಅವರ ಪುತ್ಥಳಿ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಬನಶಂಕರಿಯ ಸ್ಥಾಪತಿ ಕ್ರಿಯೇಷನ್ನಲ್ಲಿ ಪುನೀತ್ ಕಂಚಿನ ಪ್ರತಿಮೆ ನಿರ್ಮಾಣ ಆಗುತ್ತಿದೆ. ಇಂದು ಪುತ್ಥಳಿಯನ್ನು ವೀಕ್ಷಿಸಲು ಬಂದ ರಾಘವೇಂದ್ರ ರಾಜ್‍ಕುಮಾರ್ ಅವರು ಅಪ್ಪು ಪುತ್ಥಳಿಗೆ ಮುತ್ತಿಟ್ಟು ಭಾವುಕರಾದರು.

ಬಿಬಿಎಂಪಿ ಆವರಣದಲ್ಲಿ ಅಪ್ಪಾಜಿ ಪ್ರತಿಮೆ ಅನಾವರಣಕ್ಕೆ ಪುನೀತ್ ಹೋಗಿದ್ದ. ಈಗ ಅವನ ಪ್ರತಿಮೆ ಅಲ್ಲಿ ಅಪ್ಪಾಜಿ ಪಕ್ಕ ಸ್ಥಾಪನೆ ಆಗ್ತಿದೆ. ನಾವು ಹೀಗಾಗುತ್ತೆ ಅಂದುಕೊಂಡಿರಲಿಲ್ಲ. ಅಪ್ಪು ತರಾತುರಿಯಲ್ಲಿ ಹೋಗಿಬಿಟ್ಟರು. ಆದರೆ ಅವರ ಪುತ್ಹಳಿ ನಿರ್ಮಾಣಕ್ಕೆ ತರಾತುರಿ ಬೇಡ. ತಡವಾದರೂ ಪರವಾಗಿಲ್ಲ, ಪ್ರತಿಮೆ ಸುಂದರವಾಗಿ ಮಾಡಿ ಎಂದು ಕಲಾವಿದರಿಗೆ ಹೇಳಿದರು.