ಪೆಟ್ರೋಲ್, ಡೀಸೆಲ್ ದರ ಮತ್ತೆ ಏರಿಕೆ : ಪೆಟ್ರೋಲ್ 30 ಪೈಸೆ, ಡೀಸೆಲ್ 35 ಪೈಸೆಗೆ ಹೆಚ್ಚಳ…

86
First Suddi

ನವದೆಹಲಿ : ಭಾರತದಲ್ಲಿ ಇಂದೂ ಮತ್ತೆ ಪೆಟ್ರೋಲ್, ಡೀಸೆಲ್‍ನ ಬೆಲೆಯಲ್ಲಿ ಏರಿಕೆ ಕಂಡಿದ್ದು, ತೈಲೋತ್ಪನ್ನಗಳ ದರಗಳಲ್ಲಿ ಪ್ರತೀ ಲೀಟರ್ ಗೆ 30 ರಿಂದ 35 ಪೈಸೆಯಷ್ಟು ಏರಿಕೆಯಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್‍ನ ದರ 30 ಪೈಸೆ ಏರಿಕೆಯಾಗಿ ಪ್ರತೀ ಲೀಟರ್ ಗೆ   89.29 ರೂ ಏರಿಕೆಯಾಗಿದ್ದರೆ, ಡೀಸೆಲ್ ದರ ಕೂಡ 35 ಪೈಸೆ ಏರಿಕೆಯಾಗಿ ಪ್ರತೀ ಲೀಟರ್ ಗೆ  79.70ರೂ ಗೆ ಏರಿಕೆಯಾಗಿದೆ. ಮುಂಬೈನಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರ 95.73 ಏರಿಕೆಯಾಗಿದ್ದು, ಡೀಸೆಲ್‍ನ ದರ 86.7ರೂ ಗೆ ಏರಿಕೆಯಾಗಿದೆ. ಚೆನ್ನೈನಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರ 91.44 ರೂಗೆ ಏರಿಕೆಯಾಗಿದ್ದು, ಡೀಸೆಲ್ ದರ 84.75 ರೂಗೆ ಏರಿಕೆಯಾಗಿದೆ. ಕೋಲ್ಕತಾದಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರ 90.52 ರೂಗೆ ಮತ್ತು ಡೀಸೆಲ್ 83.27 ರೂಗೆ ಏರಿಕೆಯಾಗಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೂ ಪೆಟ್ರೋಲ್ ದರ ಏರಿಕೆಯಾಗಿದ್ದು, ಪ್ರತಿ ಲೀಟರ್ ಪೆಟ್ರೋಲ್ ಬೆಲೆ 92.26 ರೂ ಹಾಗೂ ಡೀಸೆಲ್ ಬೆಲೆ 84.47 ರೂ ಗೆ ಏರಿಕೆಯಾಗಿದೆ.