ಪೆಟ್ರೋಲ್, ಡೀಸೆಲ್ 40 ಪೈಸೆ ಹೆಚ್ಚಳ ; ದೇಶಾದ್ಯಂತ ಇಂದಿನ ತೈಲ ದರ ಹೀಗಿದೆ…

52
firstsuddi

ನವದೆಹಲಿ : ಇಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮತ್ತೆ ಏರಿಕೆಯಾಗಿದ್ದು, ಪ್ರತಿ ಲೀಟರ್ ಗೆ ತಲಾ 40 ಪೈಸೆ ಹೆಚ್ಚಿಸಲಾಗಿದೆ.

ದೆಹಲಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಲೀಟರ್ ಗೆ 40 ಪೈಸೆ ಹೆಚ್ಚಳ ಮಾಡಲಾಗಿದೆ. ಈ ಮೂಲಕ ಪ್ರತಿ ಲೀಟರ್ ಪೆಟ್ರೋಲ್ 103.81 ರೂ ಮತ್ತು ಡೀಸೆಲ್ 95.07 ರೂ.ಗೆ ತಲುಪಿದೆ. ಮುಂಬೈನಲ್ಲಿ ಲೀ. ಪೆಟ್ರೋಲ್ ದರ 118.83 ರೂ. ಹಾಗೂ ಡೀಸೆಲ್ 103.07 ರೂ . ದಾಖಲಾಗಿದೆ. ಚೆನ್ನೈನಲ್ಲಿ ಲೀ. ಪೆಟ್ರೋಲ್ ದರ 109.34 ರೂ. ಹಾಗೂ ಡೀಸೆಲ್ ದರ ಲೀಟರ್ ಗೆ 99.42 ರೂ. ಇದೆ.

ಇನ್ನೂ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 109.41 ರೂ. ಮತ್ತು ಡೀಸೆಲ್ ದರ 93.23 ರೂ.ಗೆ ತಲುಪಿದೆ. ಕಳೆದ 14 ದಿನಗಳಲ್ಲಿ ನಡೆದ 12 ಪರಿಷ್ಕರಣೆಗಳಲ್ಲಿ ಪ್ರತಿ ಲೀಟರ್ ಗೆ ಸುಮಾರು 8.40ರಷ್ಟು ಹೆಚ್ಚಾಗಿದೆ.