ಪ್ರತಿಭಟನೆಗೆ ತೆರಳುತ್ತಿದ್ದ ನಟಿ, ಬಿಜೆಪಿ ನಾಯಕಿ ಖಷ್ಬೂ ಅವರ ಬಂಧನ…

162
firstsuddi

ಚೆನ್ನೈ : ಪ್ರತಿಭಟನೆಯಲ್ಲಿ ಭಾಗವಹಿಸಲು ತೆರಳುತ್ತಿದ್ದ ನಟಿ, ಬಿಜೆಪಿ ನಾಯಕಿ ಖುಷ್ಬೂ ಸುಂದರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ವಿಸಿಕೆ ನಾಯಕ ತಿರುಮಾಳವನ್ ಅವರು ಮಹಿಳೆಯರ ಘನತೆಗೆ ಧಕ್ಕೆ ತರುವಂತಹ ಹೇಳಿಕೆ ನೀಡಿದ್ದನ್ನು ಖಂಡಿಸಿ ನಟಿ ಖುಷ್ಬೂ ಸೇರಿದಂತೆ ಹಲವು ಬಿಜೆಪಿ ನಾಯಕರು ಚಿದಂಬರಂನಲ್ಲಿ ಇರುವ ಸಂಸದತ ಮನೆ ಮುಂದೆ ಪ್ರತಿಭಟನೆ ನಡೆಸಲು ತೆರಳುತ್ತಿದ್ದರು. ಈ ವೇಳೆ ಪೊಲೀಸರು ಚೆನ್ನೈನ ಇಸಿಆರ್ ನಲ್ಲಿ ಮುಂಜಾಗೃತ ಕ್ರಮವಾಗಿ ಖುಷ್ಬೂ ಅವರನ್ನು ಬಂಧಿಸಿದ್ದಾರೆ.