ಇಸ್ಲಾಮಾಬಾದ್ : ಪ್ರಧಾನಿ ಅಧಿಕೃತ ನಿವಾಸವನ್ನು ಇಮ್ರಾನ್ ಖಾನ್ ಅವರು ಬಾಡಿಗೆಗೆ ನೀಡಲಿರುವ ಸುದ್ದಿ ಹೊರಬಿದ್ದಿದೆ. ಇದನ್ನು ಬಾಡಿಗೆಗೆ ಕೊಡುವ ಬಗ್ಗೆ ಖುದ್ದು ಇಮ್ರಾನ್ ಖಾನ್ ಅವರೇ ಹೀಗೊಂದು ನಿರ್ಧಾರಕ್ಕೆ ಬಂದಿದ್ದಾರೆ ಎಂದು ಪಾಕಿಸ್ತಾನ ಸುದ್ದಿ ಮೂಲಗಳಿಂದ ತಿಳಿದುಬಂದಿದೆ. 2019ರ ಅಗಸ್ಟ್ ನಲ್ಲಿ ಇಮ್ರಾನ್ ಖಾನ್ ಪ್ರಧಾನಿ ಸರ್ಕಾರದ ಅಧಿಕೃತ ನಿವಾಸದಿಂದ ಸ್ವಂತ ಮನೆಗೆ ಶಿಫ್ಟ್ ಆಗಿದ್ದರು.
ಪಾಕಿಸ್ತಾನ ಸರ್ಕಾರಕ್ಕೀಗ ಹಣದ ಕೊರತೆ ತೀವ್ರವಾಗಿದೆ. ಇದನ್ನು ನೀಗಿಸಲು, ಆದಾಯದ ಮೂಲವಾಗಿ ಈ ಸರ್ಕಾರಿ ನಿವಾಸವನ್ನು ಬಾಡಿಗೆಗೆ ಕೊಡಲಾಗುವುದು. ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಫ್ಯಾಷನ್ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ಈ ಪ್ರಧಾನಿ ನಿವಾಸ ಬಾಡಿಗೆಗೆ ಸಿಗಲಿದೆ. ಸರ್ಕಾರದ ಯಾವುದೇ ನಿಯಮಗಳನ್ನು ಉಲ್ಲಂಘಿಸದೇ ಈ ಕಟ್ಟಡ ಬಳಸಿಕೊಳ್ಳಬಹುದಾಗಿದೆ ಎಂದು ಕಾಲ್ ಫೆಡೆರಲ್ ಕ್ಯಾಬಿನೆಟ್ ನಿನ್ನೆ ಇಟ್ಟ ಆದೇಶ ಹೊರಡಿಸಿದೆ.
ಈ ಪ್ರಧಾನಿ ನಿವಾಸವನ್ನು ವಿಶ್ವವಿದ್ಯಾಲಯವಾಗಿ ಪರಿವರ್ತಿಸತ್ತೇವೆ ಎಂದು ಪಾಕಿಸ್ತಾನ ಸರ್ಕಾರ ಹೇಳಿತ್ತು. ಆದರೀಗ ಪ್ರಧಾನಿ ನಿವಾಸ ಕಟ್ಟಡವನ್ನು ಬಾಡಿಗೆಗೆ ನೀಡಲಾಗುವುದು ಎಂದು ತಿಳಿಸಿದೆ.










