ಪ್ರಧಾನಿ ಮೋದಿ ಭೇಟಿ ಮಾಡಿದ ಜಗ್ಗೇಶ್.

65
firstsuddi

ಮಾರ್ಚ್ 17ರಂದು ಜಗ್ಗೇಶ್ ಅವರ ಜನ್ಮದಿನ. ಹುಟ್ಟು ಹಬ್ಬದ ಮೂರುದಿನದ ಮುಂಚೆಯೇ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ.

ಜಗ್ಗೇಶ್ ಅವರು ದೆಹಲಿಯ ಪಿಎಂ ನಿವಾಸದಲ್ಲಿ ಕಿರಿಯ ಪುತ್ರ ಯತಿರಾಜ್, ಪತ್ನಿ ಪರಿಮಳಾ ಜೊತೆ ಪ್ರಧಾನಿಯನ್ನು ಭೇಟಿ ಮಾಡಿದ್ದು, ಮಂತ್ರಾಲಯದಿಂದ ತೆಗೆದುಕೊಂಡು ಹೋಗಿದ್ದ ರಾಯರ ವಿಗ್ರಹ ಮತ್ತು ವಿಶೇಷ ಶಾಲನ್ನು ಮೋದಿಗೆ ಅರ್ಪಿಸಿದ್ದಾರೆ. ಮೋದಿ ಕೂಡ ಜಗ್ಗೇಶ್ ಪುತ್ರನ ಹಾಗೂ ಪತ್ನಿಯ ಜೊತೆ ಸಲುಗೆಯಿಂದಲೇ ಮಾತನಾಡಿದ್ದಾರೆ. ಆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಜಗ್ಗೇಶ್ ಹಂಚಿಕೊಂಡಿದ್ದಾರೆ.

‘ನನ್ನ ಬದುಕಿನ ಶ್ರೇಷ್ಠದಿನ ಇಂದು. ಮಾರ್ಚ್ 17 ನನ್ನ ಹುಟ್ಟುದಿನ. ಈ ವರ್ಷ ನನಗೆ 60ನೇ ವಸಂತ. ನನ್ನ ನೆಚ್ಚಿನ ಪ್ರಧಾನಿಗಳು ನನ್ನ ಹಾಗೂ ಹೆಂಡತಿ ಮಗನ ಮನತುಂಬಿ ಹರಸಿದರು. ನನ್ನ ಗುರುಗಳು ರಾಯರ ವಿಗ್ರಹ ಸಮರ್ಪಿಸಿದೆ’ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಜಗ್ಗೇಶ್ ಅವರು 60 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿಯ ಹುಟ್ಟು ಹಬ್ಬ ಹೇಗಿರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ.