ನವದೆಹಲಿ : ಸತತ 2 ವಾರಗಳಿಂದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಇಂಧನವನ್ನು ಬೈಕ್, ಕಾರು, ಲಾರಿಗಳಿಗೆ ತುಂಬಿಸಿಕೊಳ್ಳಲು ದುಪ್ಪಟ್ಟು ದರ ನೀಡಬೇಕು ಎಂಬುದನ್ನು ತೋರಿಸುವ ರೀತಿಯ ಚಿತ್ರವನ್ನು ತಮ್ಮ ಅಧಿಕೃತ ಖಾತೆಯಲ್ಲಿ ಹಂಚಿಕೊಂಡಿದ್ದು, ಇದಕ್ಕೆ ಪ್ರಧಾನ ಮಂತ್ರಿ ಜನ್ ಧನ್ ಲೂಟ್ ಯೋಜನೆ ಎಂದು ರಾಹುಲ್ ಗಾಂಧಿ ಶೀರ್ಷಿಕೆ ನೀಡಿದ್ದಾರೆ.
Pradhan Mantri Jan Dhan LOOT Yojana pic.twitter.com/OQPiV4wXTq
— Rahul Gandhi (@RahulGandhi) April 4, 2022










