ಪ್ರಬಲ ಭೂಕಂಪನಕ್ಕೆ ನಲುಗಿದ ಟರ್ಕಿ, ಸಿರಿಯಾ – 4,000ಕ್ಕೂ ಅಧಿಕ ಮಂದಿ ಸಾವು…

62
firstsuddi

ಇಸ್ತಾಂಬುಲ್ : ಟರ್ಕಿ ಹಾಗೂ ಸಿರಿಯಾದಲ್ಲಿ ಒಂದೇ ದಿನ 3 ಬಾರಿ ಪ್ರಬಲ ಭೂಕಂಪ ಸಂಭವಿಸಿದ್ದು, ಇಲ್ಲಿಯವರೆಗೆ 4000ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಸುಮಾರು 15 ಸಾವಿರ ಮಂದಿ ಗಾಯಗೊಂಡಿದ್ದಾರೆ. 4,900 ಕಟ್ಟಡಗಳು ಸಂಪೂರ್ಣ ನೆಲಸಮವಾಗಿವೆ.

ದಕ್ಷಿಣ ಟರ್ಕಿ, ಉತ್ತರ ಸಿರಿಯಾ, ಲೆಬನಾನ್, ಇಸ್ರೇಲ್ ನಲ್ಲೂ ತೀವ್ರ ಕಂಪನ ಉಂಟಾಗಿದೆ. ಟರ್ಕಿಯ ದಿಯರ್ ಬಕರ್, ಸಿರಿಯಾದ ಅಲೆಪ್ಪೀ, ಹುಮಾ ನಗರಗಳಲ್ಲಿ ಸಾವಿರಾರು ಕಟ್ಟಡ ನೆಲಸಮವಾಗಿವೆ. 7.8 ರಷ್ಟು ತೀವ್ರತೆಯ ಭೂಕಂಪದ ಬಳಿಕ ಗಂಟೆಗಳ ಅವಧಿಯಲ್ಲಿ 20ಕ್ಕೂ ಹೆಚ್ಚು ಬಾರಿ ಭೂಮಿ ಕಂಪಿಸಿದ್ದು, ಹೆಚ್ಚು ಸಾವು ನೋವಿಗೆ ಕಾರಣವಾಗಿದೆ. ಭೂಕಂಪ ಪೀಡಿತ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.

ಈಗಾಗಲೇ ಟರ್ಕಿ, ಸಿರಿಯಾಗೆ ವಿಶ್ವದ 45 ರಾಷ್ಟ್ರಗಳು ನೆರವು ಘೋಷಣೆ ಮಾಡಿವೆ. ಭಾರತ ಸಹ ಎನ್‌ಡಿಆರ್‌ಎಫ್ (NDRF) ಮೊದಲ ತಂಡವನ್ನು ಕಳಿಸಿಕೊಟ್ಟಿದೆ.

1939ರಲ್ಲಿ ಟರ್ಕಿಯಲ್ಲಿ 7.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿತ್ತು. ಇದರಲ್ಲಿ 30 ಸಾವಿರ ಜನರು ಸಾವನ್ನಪ್ಪಿದ್ದರು, 1999 ರಲ್ಲಿ, ಟರ್ಕಿಯಲ್ಲಿ 7.2 ತೀವ್ರತೆಯ ಭೂಕಂಪವು 845 ಜನರನ್ನು ಬಲಿ ಪಡೆದಿತ್ತು.