ಮುಂಬೈ : ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಮಾಡಿ ಎನ್ಸಿಬಿ ಬಲೆಗೆ ಬಿದ್ದಿರುವ ಆರ್ಯನ್ ಖಾನ್ ಅವರನ್ನು ಇಂದು ಬಾಲಿವುಡ್ ನಟ ಶಾರೂಖ್ ಖಾನ್ ಭೇಟಿಯಾಗಿದ್ದಾರೆ.
ಆರ್ಯನ್ ಖಾನ್ ಬಂದನದ ಬಳಿಕ ಇದೇ ಮೊದಲ ಬಾರಿಗೆ ಮುಂಬೈನ ಆರ್ಥರ್ ರೋಡ್ ಜೈಲಿಗೆ ಆಗಮಿಸಿ ಮಗನನ್ನು ಭೇಟಿಯಾಗಿ ಸುಮಾರು 20 ನಿಮಿಷಗಳ ಕಾಲ ಕಳೆದರು.
ಆರ್ಯನ್ ಖಾನ್ ಗೆ ಜಾಮೀನು ನೀಡುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಆದರೆ ನಿನ್ನೆ ಅರ್ಜಿ ವಿಚಾರಣೆ ನಡೆಸಿದ ಮುಂಬೈನ ವಿಶೇಷ ಎನ್ಡಿಪಿಎಸ್ ನ್ಯಾಯಾಲಯ ಬೇಲ್ ಅರ್ಜಿಯನ್ನು ನಿರಾಕರಿಸಿದೆ. ಇದೀಗ ಆರ್ಯನ್ ಪರ ವಕೀಲರು ಜಾಮೀನು ವಜಾಗೊಂಡ ಕಾರಣ ಹೈಕೋರ್ಟ್ ನಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಲಿದ್ದಾರೆ. ಈ ಕುರಿತ ವಿಚಾರಣೆಗಳು ಇನ್ನಷ್ಟೇ ನಡೆಯಬೇಕಿದೆ.










