‘ಬಲಗಂ’ ಖ್ಯಾತಿಯ ಜಪನದ ಗಾಯಕ ಪದ್ಮಶ್ರೀ ಮೊಗಿಲಯ್ಯ ನಿಧನ.

35

‘ಬಲಗಂ’ ಸಿನಿಮಾದ ಮೂಲಕ ಭಾರಿ ಜನಪ್ರಿಯತೆ ಗಳಿಸಿದ ಖ್ಯಾತ ಜನಪದ ಗಾಯಕ, ಕಿನ್ನರ ಮೊಗಿಲಯ್ಯ ಅಂದೇ ಪ್ರಸಿದ್ಧರಾಗಿದ್ದ ಮೊಗಿಲಯ್ಯ ಅವರು ಇಂದು ವರಾಂಗಲ್‍ನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ‘ಬಲಗಂ’, ‘ಭೀಮ್ಲಾ ನಾಯಕ್’ ಸಿನಿಮಾಗಳಲ್ಲಿ ಮೊಗಿಲಯ್ಯ ಹಾಡು ಹಾಡಿದ್ದರು. ತೆಲುಗಿನ ‘ಬಲಗಂ’ ಸೇರಿದಂತೆ ಪವನ್ ಕಲ್ಯಾಣ್ ನಟನೆಯ ‘ಭೀಮ್ಲಾ ನಾಯಕ್’ ಇನ್ನಿತರೆ ಸಿನಿಮಾಗಳಲ್ಲಿ ಹಾಡು ಹಾಡಿದ್ದ ಜನಪದ ಗಾಯಕ ಮೊಗಿಲಯ್ಯ ನಿಧನ ಹೊಂದಿದ್ದಾರೆ. ಅವರಿಗೆ 73 ವರ್ಷ ವಯಸ್ಸಾಗಿತ್ತು. ‘ಬಲಗಂ’ ಸಿನಿಮಾದಲ್ಲಿ ಮುಗಿಲಯ್ಯ ಹಾಡಿದ ಹಾಡು ಬಹಳ ಜನಪ್ರಿಯವಾಗಿತ್ತು. ಆ ಹಾಡು ಬಿಡುಗಡೆ ಆದ ಬಳಿಕ ಅವರ ಜನಪ್ರಿಯ ಆಂಧ್ರ ಮತ್ತು ತೆಲಂಗಾಣದಲ್ಲಿ ಬಹಳ ಹೆಚ್ಚಾಗಿತ್ತು. ಮುಗಿಲಯ್ಯ ಕೆಲವು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಮೊಗಿಲಯ್ಯಗೆ ತೆಲಂಗಾಣದಮಾಜಿ ಸಚಿವ ಕೆಟಿಆರ್ ಸೇರಿದಂತೆ ಪವನ್ ಕಲ್ಯಾಣ್, ನಿರ್ಮಾಪಕ ದಿಲ್ ರಾಜು, ಚಿರಂಜೀವಿ ಇನ್ನಿತರರು ಆರ್ಥಿಕ ಸಹಾಯ ಸಹ ಮಾಡಿದ್ದರು. ಕಳೆದ ಕೆಲ ತಿಂಗಳಿನಿಂದ ಕಿಡ್ನಿಗೆ ಸಂಬಂಧಿಸಿದ ಸಮಸ್ಯೆಯಿಂದ ಬಳಲಿದ ಮೊಗಿಲಯ್ಯ ಇಂದು ವರಾಂಗಲ್‍ನ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಮುಗಿಲಯ್ಯ ನಿಧನಕ್ಕೆ ಸಚಿವ ಕೆಟಿಆರ್ ಸೇರಿದಂತೆ ಹಲವು ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ‘ನಿನ್ನ ಹಾಡಿಗೆ ಕರಗದ ಹೃದಯವಿಲ್ಲ, ತೇವಗೊಳ್ಳದ ಕಣ್ಣುಗಳಿಲ್ಲ’ ಎಂದು ಕವಿತೆಯನ್ನೇ ಕೆಟಿಆರ್ ಬರೆದಿದ್ದಾರೆ. ಇನ್ನೂ ಹಲವಾರು ಮಂದಿ ರಾಜಕೀಯ ನಾಯಕರು, ಸಿನಿಮಾ ಮಂದಿ ಮೊಗಿಲಯ್ಯ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.