ಬಾಲಿವುಡ್ ನಟ, ನಟಿಯರ ಹೆಸರು ಬಳಸಿ ವಂಚನೆ…

56
firstsuddi

ಬಾಲಿವುಡ್ ನಟ, ನಟಿಯರು ಹಾಗೂ ಕ್ರಿಕೆಟ್ ತಾರೆಗಳ ಹೆಸರು ಬಳಸಿ ವಂಚನೆ ಮಾಡುತ್ತಿದ್ದ ಜಾಲವನ್ನು ದೆಹಲಿ ಪೊಲೀಸರು ಪತ್ತೆ ಮಾಡಿದ್ದಾರೆ.

ನಟಿ ಶಿಲ್ಪಾ ಶೆಟ್ಟಿ, ನಟ ಅಭಿಷೇಕ್ ಬಚ್ಚನ್, ಇಮ್ರಾನ್ ಹಶ್ಮಿ, ಮಾಧುರಿ ದೀಕ್ಷಿತ್, ಕ್ರಿಕೆಟಿಗ ಎಂಎಸ್ ಧೋನಿ ಸೇರಿದಂತೆ ಹಲವರ ಪ್ಯಾನ್ ನಂಬರ್ ಹಾಗೂ ಇತರೆ ಕೆಲವು ದಾಖಲೆಗಳನ್ನು ಬಳಸಿ ಸಂಸ್ಥೆಯೊಂದರಿಂದ ಕ್ರೆಡಿಟ್ ಕಾರ್ಡ್ ಪಡೆದು ಲಕ್ಷಾಂತರ ಹಣ ವಂಚನೆ ಮಾಡಲಾಗಿದೆ.

ಗೂಗಲ್ ನಲ್ಲಿ ಲಭ್ಯವಿರುವ ಜಿ.ಎಸ್.ಟಿ ಗುರುತಿನ ಸಂಖ್ಯೆ ಬಳಸಿಕೊಂಡು ಮತ್ತು ಆನ್ ಲೈನ್ ನಲ್ಲಿ ಸಿಗುವ ಅವರ ಹುಟ್ಟಿದ ದಿನಾಂಕ ಹಾಗೂ ಇತರ ಮಾಹಿತಿಯನ್ನು ಪಡೆದುಕೊಂಡು ವಂಚಕರು ಭಾರೀ ವಂಚನೆಗೆ ಮುಂದಾಗಿದ್ದರು. ಪುಣೆ ಮೂಲದ ಸ್ಟಾರ್ಟ್ ಅಪ್ ಕಂಪನಿಯಿಂದ ತಾರೆಯರ ಹೆಸರಿನಲ್ಲಿ ಅವರು ಕ್ರೆಡಿಟ್ ಕಾರ್ಡ್ ಗಳನ್ನು ಪಡೆದುಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಂಚನೆಯ ಜಾಲವನ್ನು ಪತ್ತೆ ಹಚ್ಚಿದಾಗ ಮತ್ತಷ್ಟು ಆಘಾತಕಾರಿ ಸುದ್ದಿಗಳು ಪೊಲೀಸರಿಗೆ ಸಿಕ್ಕಿವೆ ಎಂದು ಹೇಳಲಾಗುತ್ತಿದೆ.