ಚಿಕ್ಕಮಗಳೂರು : ಪ್ರೇಯಸಿಗೆ ಚಾಕು ಇರಿದು ಭಗ್ನಪ್ರೇಮಿ ಪರಾರಿಯಾಗಿರೋ ಘಟನೆ ಮೂಡಿಗೆರೆ ತಾಲೂಕಿನ ಮಾಲಗೋಡುವಿನಲ್ಲಿ ನಡೆದಿದೆ. ಬಿಂದು ಎಂಬಾಕೆಗೆ ಮಿಥುನ್ ಎಂಬಾತ ಕುತ್ತಿಗೆ ಹಾಗೂ ಹೊಟ್ಟೆಯ ಭಾಗಕ್ಕೆ ಚಾಕು ಇರಿದು ಎಸ್ಕೇಪ್ ಆಗಿದ್ದಾನೆ. ಮಿಥುನ್, ಎನ್.ಆರ್ ಪುರ ತಾಲೂಕಿನ ಗಡಿಗೇಶ್ವರದ ನಿವಾಸಿಯಾಗಿದ್ದು, ಖಾಂಡ್ಯ ಸಮೀಪದ ಬಾಸಾಪುರ ಗ್ರಾಮದ ಬಿಂದು ಜೊತೆ ಪ್ರೀತಿಯಲ್ಲಿ ಬಿದ್ದಿದ್ದ ಎನ್ನಲಾಗಿದೆ. ಇಬ್ಬರು ಮಾಲಗೋಡುವಿನಲ್ಲಿ ಭದ್ರಾ ನದಿ ತೀರದಲ್ಲಿ ಮಾತನಾಡುತ್ತ ಕುಳಿತಿದ್ದ ವೇಳೆ, ಪರಸ್ಪರ ಜಗಳ ಮಾಡಿಕೊಂಡು, ಜಗಳ ವಿಕೋಪಕ್ಕೆ ಹೋದ ಪರಿಣಾಮ, ಪ್ರೇಯಸಿ ಬಿಂದುನನ್ನ ಭದ್ರ ನದಿಗೆ ಮಿಥುನ್ ದೂಡಿದ್ದಾನೆ. ಆ ಬಳಿಕ ಮತ್ತೇ ನದಿಯಿಂದ ಎದ್ದು ಬಂದ ಬಿಂದು ಮೇಲೆ ಚಾಕುವಿನಿಂದ ಮನಸೋ ಇಚ್ಚೇ ಹಲ್ಲೆ ಮಾಡಿ ಮಿಥುನ್ ಪರಾರಿಯಾಗಿದ್ದಾನೆ. ಘಟನೆಯನ್ನ ನೋಡಿದ ಸಾರ್ವಜನಿಕರು, ಕಳಸ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಹಾಸನಕ್ಕೆ ರವಾನಿಸಲಾಗಿದೆ. ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪಾಗಲ್ ಪ್ರೇಮಿಗಾಗಿ ಹುಡುಕಾಟ ನಡೆಸಿದ್ದಾರೆ.










