ಬೆಂಗಳೂರು : ಮೂರನೇ ವಾರ ಬಿಗ್ ಬಾಸ್ ಮನೆಯಿಂದ ಗೀತಾ ಭಾರತಿಯವರು ಔಟ್ ಆಗಿದ್ದಾರೆ.
ಬಿಗ್ ಬಾಸ್ ಮನೆಗೆ ಒಟ್ಟು 17 ಜನರು ಎಂಟ್ರಿ ಕೊಟ್ಟಿದ್ದರು, ಈ ಪೈಕಿ ಗೀತಾ ಸೇರಿದಂತೆ ಮೂವರು ಮನೆಯಿಂದ ಹೊರ ಬಂದಿದ್ದು, ಮೊದಲ ವಾರ ಟಿಕ್ ಟಾಕ್ ಸ್ಟಾರ್ ಧನುಶ್ರೀ ಹಾಗೂ ಎರಡನೇ ವಾರ ನಿರ್ಮಲಾ ಚೆನ್ನಪ್ಪ ಹೊರ ಬಂದಿದ್ದರು.
ಮೂರನೇ ವಾರದ ಶನಿವಾರ ಕೊನೆಯ ನಾಮಿನೇಷನ್ ಲಿಸ್ಟ್ ನಲ್ಲಿ ಶಮಂತ್, ರಘು, ದಿವ್ಯಾ ಉರುಡುಗ ವಿಶ್ವನಾಥ್ ಮತ್ತು ಗೀತಾ ಉಳಿದುಕೊಂಡಿದ್ದರು. ಇದೀಗ ಗೀತಾ ಹೊರ ನಡೆದಿದ್ದಾರೆ.
ಮನೆಯಿಂದ ಹೊರ ಬಂದ ಗೀತಾ ಅವರು ಸುದೀಪ್ ಅವರ ಜೊತೆ ವೇದಿಕೆಯನ್ನು ಹಂಚಿಕೊಂಡಿದ್ದು, ಬಿಗ್ ಬಾಸ್ ವಾಯ್ಸ್ ಮೇಲೆ ತುಂಬಾನೇ ಲವ್ ಆಗಿದೆ. ಮನೆಯಲ್ಲಿರೋ ಎಲ್ಲರನ್ನು ತುಂಬಾನೇ ಪ್ರೀತಿಸುತ್ತೇನೆ. ಮುಂದೆ ಹಾಡುತ್ತೇನೆ, ನಟಿಸುತ್ತೇನೆ ಜೊತೆಗೆ ಸಣ್ಣಗಾಗುತ್ತೇನೆ ಎಂದು ಹೇಳಿದರು.










