ಬಿಜಿಎಸ್ ಆಸ್ಪತ್ರೆಯಿಂದ ನಟ ದರ್ಶನ್ ಡಿಸ್ಚಾರ್ಜ್.

31

ಬೆಂಗಳೂರು: ಬಿಜಿಎಸ್ ಆಸ್ಪತ್ರೆಯಿಂದ ನಟ ದರ್ಶನ್ ಡಿಸ್ಚಾರ್ಜ್ ಆಗಿದ್ದಾರೆ. 45 ದಿನಗಳ ದರ್ಶನ್ ಅವರ ಆಸ್ಪತ್ರೆ ವಾಸ ಅಂತ್ಯವಾಗಿದ್ದು ಈಗ ಮನೆ ಕಡೆ ತೆರಳುತ್ತಿದ್ದಾರೆ. ಈ ಮೊದಲು ದರ್ಶನ್ ಅವರಿಗೆ ವೈದ್ಯಕೀಯ ಚಿಕಿತ್ಸೆಯ ಹಿನ್ನೆಲೆಯಲ್ಲಿ ಜಾಮೀನು ಸಿಕ್ಕಿತ್ತು. ಹೈಕೋರ್ಟ್ ವಿಚಾರಣೆಯ ಸಮಯದಲ್ಲಿ ದರ್ಶನ್ ಪರ ವಕೀಲರು ಶಸ್ತ್ರಚಿಕಿತ್ಸೆ ನಡೆಸುವ ಅಗತ್ಯವಿದೆ ಎಂದು ತಿಳಿಸಿದ್ದರು. ಶುಕ್ರವಾರ ದರ್ಶನ್ ಅವರಿಗೆ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಜಾಮೀನು ಸಿಕ್ಕಿದ ಬಳಿಕ ದರ್ಶನ್ ಅವರಿಗೆ ಆಪರೇಷನ್ ನಡೆಸುವುದು ಅನುಮಾನ ಎಂಬ ಮಾತು ಕೇಳಿ ಬಂದಿತ್ತು. ಈ ಅನುಮಾನ ನಿಜವಾಗಿದ್ದು ದರ್ಶನ್ ಆಪರೇಷನ್ ಮಾಡಿಸದೇ ಈಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.