ಬಿಟ್ ಕಾಯಿನ್ ಹಗರಣ ಕಾಂಗ್ರೆಸ್ ಮನೆ ಬಾಗಿಲು ತಟ್ಟುತ್ತಿದೆ – ಸುನೀಲ್ ಕುಮಾರ್.

55
firstsuddi

ಕಾರ್ಕಳ : ಬಿಟ್ ಕಾಯಿನ್ ಹಗರಣ ಕಾಂಗ್ರೆಸ್ ಮನೆ ಬಾಗಿಲು ತಟ್ಟುತ್ತಿದೆ ಎಂದು ಇಂಧನ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.

ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇದೊಂದು ಯಾವುದೇ ದಾಖಲೆಗಳು ಇಲ್ಲದ ಪ್ರಕರಣವಾಗಿದ್ದು ಬಿಟ್ ಕಾಯಿನ್ ಶಬ್ದ ಸಾಮಾನ್ಯರಿಗೆ ಅರ್ಥ ಆಗಲ್ಲ. ಅವ್ಯವಹಾರ ಹೇಗಾಗಿದೆ ಎಂದು ಸ್ಪಷ್ಟ ಮಾಡಲು ಕಾಂಗ್ರೆಸ್ ಗೂ ಆಗಿಲ್ಲ, ವಿನಾಕಾರಣ ಕಾಂಗ್ರೆಸ್ ನಾಯಕರು ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಗಮನ ಬೇರೆಡೆಗೆ ಸೆಳೆಯಲು ಕಾಂಗ್ರೆಸ್ ಯತ್ನಿಸುತ್ತದೆ ಎಂದು ಹೇಳಿದರು.

ಬೇರೆಬೇರೆ ರಾಜ್ಯದ ಟೆಂಡರ್ ಹ್ಯಾಕ್ ಮಾಡಿದ್ದಾಗಿ ಆರೋಪಿಯೇ ಒಪ್ಪಿಕೊಂಡಿದ್ದಾನೆ. ಅಲ್ಲದೆ 2015-16 ರಿಂದ ಈ ರೀತಿ ಮಾಡ್ತಾ ಇದ್ದೇನೆ ಎಂದು ಒಪ್ಪಿಕೊಂಡಿದ್ದಾನೆ. ಈ ಸಂದರ್ಭದಲ್ಲಿ ಐಟಿ ಬಿಟಿ ಸಚಿವ ಯಾರಾಗಿದ್ರು? ಪ್ರಿಯಾಂಕ ಖರ್ಗೆ ಉತ್ತರಿಸಬೇಕು. ಈ ರೀತಿ ಹ್ಯಾಕ್ ಆದಾಗ ಖರ್ಗೆ ಏನ್ಮಾಡ್ತಾ ಇದ್ರು? ಅಂದು ಪ್ರಿಯಾಂಕ ಖರ್ಗೆ ಸಚಿವರಾಗಿ ಒಂದೂ ಶಬ್ದ ಮಾತಾಡಿರಲಿಲ್ಲ. ಖರ್ಗೆ ಈಗ ಆಧಾರ ರಹಿತ ಆರೋಪ ಮಾಡ್ತಾರೆ .ಹಗರಣ ಅವರ ಸುತ್ತಮುತ್ತಲೇ ಇದೆ. ಎಲ್ಲ ಸಂಗತಿ ಗೊತ್ತಿದ್ದೂ ಆವತ್ತು ಯಾಕೆ ಮುಚ್ಚಿಟ್ಟರು? ನಮಗೂ ಅನುಮಾನ ಆಗ್ತಾ ಇದೆ. ಈಗ ನಮ್ಮತ್ತ ಬಾಲ್ ಎಸೆಯುತ್ತಾರೆ. ಯೂತ್ ಕಾಂಗ್ರೆಸ್ ನಾಯಕನಿಗೂ ಡ್ರಗ್ ಪೆಡ್ಲರ್ಗೂ ಏನು ನಂಟು? ಈ ಹಿಂದೆ ಎಫ್‍ಐಆರ್ ಆದಾಗ ಯಾಕೆ ಬಂಧನ ಮಾಡಿಲ್ಲ? ಎಂದರು.

ಕಾಂಗ್ರೆಸ್ ಕಾಲದಲ್ಲಿ ರಕ್ಷಣೆ ಪಡೆದವರನ್ನು ನಾವು ಬಂಧಿಸಿದ್ದೇವೆ. ಗುಲ್ಬರ್ಗದಿಂದ ಖರ್ಗೆ ಕುಟುಂಬ ಕಣ್ಮರೆಯಾಗಿದೆ. ಬಿಟ್ ಕಾಯಿನ್ ಮೂಲಕ ಬೆಂಗಳೂರಿಲ್ಲಿ ನೆಲೆ ಕಂಡು ಕೊಳ್ತಿದ್ದಾರೆ. ಹಣಕಾಸು ಆರೋಪ ಮಾಡುವಾಗ ಎಚ್ಚರಿಕೆ ಇರಲಿ. ಆಧಾರರಹಿತವಾಗಿ ಗಾಳಿಯಲ್ಲಿ ಗುಂಡು ಹೊಡೆಯಬೇಡಿ ಎಂದು ಸಚಿವ ಸುನೀಲ್ ಕುಮಾರ್ ಕಿಡಿ ಕಾರಿದರು.