ಬೂಸ್ಟರ್ ಡೋಸ್ ತೆಗೆದುಕೊಳ್ಳುವ ಅಂತರದಲ್ಲಿ 9 ರಿಂದ 6 ತಿಂಗಳಿಗೆ ಇಳಿಕೆ…

31
firstsuddi

ನವದೆಹಲಿ : ಕೋವಿಡ್ -19 ಎರಡನೇ ಡೋಸ್ ಪಡೆದುಕೊಂಡ ಬಳಿಕ ಬೂಸ್ಟರ್ ಡೋಸ್ ತೆಗೆದುಕೊಳ್ಳುವ ಅಂತರದಲ್ಲಿ 9 ರಿಂದ 6 ತಿಂಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ಇಳಿಕೆ ಮಾಡಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಹೊಸ ಮಾರ್ಗಸೂಚಿ ಪ್ರಕಾರ 9 ತಿಂಗಳು ಅಥವಾ 39 ವಾರಗಳ ಬದಲಾಗಿ 6 ತಿಂಗಳು ಅಥವಾ 26 ವಾರಗಳಲ್ಲಿ ಇದೀಗ 18-59 ವಯಸ್ಸಿನ ಫಲಾನುಭವಿಗಳು ಕೋವಿಡ್ ಬೂಸ್ಟರ್ ಡೋಸ್ ಪಡೆದುಕೊಳ್ಳಬಹುದಾಗಿದೆ.

ರಾಷ್ಟ್ರೀಯ ತಾಂತ್ರಿಕ ಸಲಹಾ ಸಮೂಹ ಸ್ಥಾಯಿ ತಾಂತ್ರಿಕ ಉಪ ಸಮಿತಿ (ಎನ್ ಟಿಜಿಐ) ಕೋವಿಡ್-19 ಎರಡನೇ ಲಸಿಕೆ ಮತ್ತು ಬೂಸ್ಟರ್ ಡೋಸ್ ಗಳ ನಡುವಿನ ಅಂತರವನ್ನು ಆರು ತಿಂಗಳಿಗೆ ಇಳಿಸುವಂತೆ ಕಳೆದ ತಿಂಗಳು ಶಿಫಾರಸ್ಸು ಮಾಡಿತ್ತು. ಬಳಿಕ ಇದೀಗ ಎನ್ ಟಿಜಿಐ ಶಿಫಾರಸ್ಸಿಗೆ ಒಪ್ಪಿಗೆ ಸೂಚಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ.