ಬೆಂಕಿ ತಗುಲಿ ಧಗಧಗನೆ ಹೊತ್ತಿ ಉರಿದ ಲಾರಿ.

74
firstsuddi

ಧಾರವಾಡ : ಕಬ್ಬಿನ ಹೊಲದಲ್ಲಿ ಬೆಂಕಿ ತಗುಲಿ ಲಾರಿಯೊಂದು ಧಗಧಗನೆ ಹೊತ್ತಿ ಉರಿದ ಘಟನೆ ಜಿಲ್ಲೆಯ ಕಲಘಟಗಿ ತಾಲೂಕಿನ ಸೋಮನಕೊಪ್ಪ ಗ್ರಾಮದಲ್ಲಿ ನಡೆದಿದೆ. ದ್ಯಾಮಣ್ಣ ಗುಡಿಗಾಳ ಎಂಬುವರ ಜಮೀನಿನಲ್ಲಿ ಈ ಅವಘಡ ಸಂಭವಿಸಿದೆ. ಲಾರಿ ಸ್ಟಾರ್ಟ್ ಮಾಡುವಾಗ ಸ್ಪಾರ್ಕ್ ಹೊರಹೊಮ್ಮಿ ಕೆಳಗೆ ಬಿದ್ದಿದೆ. ಬೆಂಕಿಯ ಕಿಡಿ ಕಬ್ಬಿನ ಸ್ವಾಗಿಗೆ ( ಒಣಗಿದ ಸಿಪ್ಪೆ) ತಗುಲಿ ಬೆಂಕಿ ಲಾರಿಗೂ ತಗುಲಿದೆ. ಬೆಂಕಿಯು ಕ್ಷಣ ಮಾತ್ರದಲ್ಲಿ ಸಂಪೂರ್ಣ ಲಾರಿಗೆ ವ್ಯಾಪಿಸಿದ್ದು, ಲಾರಿ ಸುಟ್ಟು ಕರಕಲಾಗಿದೆ.

ಅಲ್ಲದೇ ಈ ಬೆಂಕಿ ಪಕ್ಕದ ಮೂರು ಎಕರೆ ಕಬ್ಬಿನ ಗದ್ದೆಗೂ ತಾಗಿ ಕಬ್ಬು ಭಸ್ಮವಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿ, ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.