ಬೆಂಗಳೂರು : ಸಿಡಿ ಯುವತಿಯ ಮನೆಯಲ್ಲಿ 23 ಲಕ್ಷ ನಗದು ಪತ್ತೆ!

95
Firstsuddi

ಬೆಂಗಳೂರು : ಸಿಡಿ ಪ್ರಕರಣದಲ್ಲಿ ಕೇಳಿ ಬಂದಿರುವ ಯುವತಿಯ ಮನೆ ಮೇಲೆ ನಿನ್ನೆ ವಿಶೇಷ ತನಿಖಾ ತಂಡ(ಎಸ್ಐಟಿ) ಏಕಾಏಕೀ ದಾಳಿ ನಡೆಸಿದೆ.

ಎಸಿಪಿ ಧರ್ಮೇಂದ್ರ ನೇತೃತ್ವದಲ್ಲಿ ಆರ್ ಟಿ ನಗರದಲ್ಲಿ ನೆಲೆಸಿದ್ದ ಯುವತಿಯ ಮನೆಯ ಮೇಲೆ ಎಸ್ಐಟಿ ತಂಡ ದಾಳಿ ನಡೆಸಿದ್ದು, ದಾಳಿ ವೇಳೆ ಒಟ್ಟು 23 ಲಕ್ಷ ರೂ. ಹಣ ಮತ್ತು ಮಹತ್ವದ ದಾಖಲೆಗಳು ಪತ್ತೆಯಾಗಿದೆ ಎಂದು ಎಸ್ ಐಟಿ ಉನ್ನತ ಮೂಲಗಳು ತಿಳಿಸಿವೆ.

ಮಾರ್ಚ್ 2ರ ಸಂಜೆ ಸ್ಫೋಟಕ ಸಿಡಿ ರಿಲೀಸ್ ಆಗಿತ್ತು. ಸಿಡಿ ರಿಲೀಸ್ ಆಗಿ 4 ಗಂಟೆ ಬಳಿಕ ಸಂತ್ರಸ್ತೆ ಮನೆಯಿಂದ ಹೊರಗಡೆ ಬಂದಿದ್ದಾಳೆ. ಆದರೆ ಸಿಡಿಯಲ್ಲಿ ಇರುವ ಯುವತಿ ಈಗ ಎಲ್ಲಿದ್ದಾಳೆ ಎಂಬುದರ ಬಗ್ಗೆ ಮಾಹಿತಿಗಳು ಲಭ್ಯವಾಗಿಲ್ಲ. ಮನೆಯಿಂದ ಹೊರಬಂದ ಬಳಿಕ ಮೊಬೈಲ್ ಸ್ವಿಚ್ಆಫ್ ಮಾಡಿ ಸಿಮ್ ಡಿಆಕ್ಟಿವೇಟ್ ಮಾಡಿದ್ದಾಳೆ. ಮೊಬೈಲ್ ಸ್ವಿಚ್ ಆಫ್ ಮಾಡಿರುವ ವಿಚಾರ ತಾಂತ್ರಿಕ ದಾಖಲೆಗಳಿಂದ ಲಭ್ಯವಾಗಿದೆ.

ಇನ್ನು, ಮಾಜಿ ಸಚಿವರ ವಿರುದ್ಧ ಸಿಡಿ ಬಹಿರಂಗ ಪ್ರಕರಣದ ಬಗ್ಗೆ ದೂರು ನೀಡಿದ್ದ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಕೆಲ ದಿನಗಳ ಬಳಿಕ ತಮ್ಮ ದೂರನ್ನು ವಾಪಸ್ಸು ಪಡೆದಿದ್ದರು. ಈ ಕುರಿತು ಎಸ್ಐಟಿ ತನಿಖಾಧಿಕಾರಿಗಳಿಗೆ ಐದು ಪುಟಗಳ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಸದ್ಯ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಎಸ್ಐಟಿ ಎಲ್ಲ ಸಾಕ್ಷ್ಯಧಾರಗಳನ್ನು ಸಂಗ್ರಹಿಸುತ್ತಿದೆ.