ಬೆಳ್ಳಿ ಕಾಲ್ಗೆಜ್ಜೆಗಾಗಿ ಬಾಲಕಿಯ ಕತ್ತು ಹಿಸುಕಿ ಕೊಂದ ಮಹಿಳೆ…

58
firstsuddi

ಜೈಪುರ : ಬೆಳ್ಳಿಯ ಕಾಲ್ಗೆಜ್ಜೆಗಾಗಿ ಮಹಿಳೆಯೊಬ್ಬಳು ನಾಲ್ಕು ವರ್ಷದ ಬಾಲಕಿಯ ತಲೆಗೆ ಹೊಡೆದು ಕತ್ತು ಹಿಸುಕಿ ಹತ್ಯೆಗೈದು ಆಕೆಯ ಮೃತದೇಹವನ್ನು ಮನೆಯ ಹಿಂಬದಿಯ ಜಾಗದಲ್ಲಿ ಹೂತು ಹಾಕಿರುವ ಘಟನೆ ರಾಜಸ್ಥಾನದ ಝಲಾವರ್ ಜಿಲ್ಲೆಯಲ್ಲಿ ನಡೆದಿದೆ.

ಮೃತ ಬಾಲಕಿ ಮಧ್ಯಪ್ರದೇಶದ ಸುವಾಸ್ರಾ ನಿವಾಸಿಯಾಗಿದ್ದು, ಕಳೆದ ನಾಲ್ಕು ತಿಂಗಳಿನಿಂದ ರಾಜಸ್ಥಾನದ ಝಲಾವರ್ ಜಿಲ್ಲೆಯ ಮೆಹರ್‍ಪುರ  ಗ್ರಾಮದಲ್ಲಿ ತನ್ನ ಅಜ್ಜಿ ಮನೆಯಲ್ಲಿ ತಾಯಿಯೊಂದಿಗೆ ವಾಸಿಸುತ್ತಿದ್ದಳು. ಶನಿವಾರ ಸಂಜೆ ಬಾಲಕಿಯನ್ನು ತರುಣಾ(29) ಎಂಬಾಕೆ ತನ್ನ ಮನೆಗೆ ಕರೆದುಕೊಂಡು ಬಂದಿದ್ದಳು. ಈ ವೇಳೆ ಕಾಲ್ಗೆಜ್ಜೆಗಾಗಿ ಬಾಲಕಿಯ ತಲೆಗೆ ಕಲ್ಲಿನಿಂದ ಹೊಡೆದು ನಂತರ ಕತ್ತು ಹಿಸುಕಿ ಕೊಂದಿದ್ದಾಳೆ. ನಂತರ ಕಾಲ್ಗೆಜ್ಜೆ ತೆಗೆದುಕೊಂಡು ಬಾಲಕಿ ಶವವನ್ನು ಮನೆಯ ಹಿಂಬದಿಯ ಜಾಗದಲ್ಲಿ ಹೂತು ಹಾಕಿದ್ದಾಳೆ.

ಇತ್ತ ಬಾಲಕಿಯ ಕುಟುಂಬಸ್ಥರು ಆಕೆ ಕಾಣಿಯಾಗಿರುವುದಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಪ್ರಕರಣವನ್ನು ಪತ್ತೆ ಹಚ್ಚಿ ಬಾಲಕಿಯ ಶವವನ್ನು ಹೂತಿಟ್ಟಿದ್ದ ಜಾಗದಿಂದ ಹೊರತೆಗೆದಿದ್ದಾರೆ. ಆರೋಪಿ ಮಹಿಳೆಯನ್ನು ಬಂಧಿಸಲಾಗಿದೆ.