ಹಾಸನ : ಮುಂಜಾನೆ ಸ್ಪೆಶಲ್ ಕ್ಲಾಸ್ ಎಂದು ಶಾಲೆಗೆ ಹೋಗುವ ಕೆಲವು ವಿದ್ಯಾರ್ಥಿ-ವಿದ್ಯಾರ್ಥಿನಿಯರ ಅಸಭ್ಯ ವರ್ತನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಘಟನೆ ಬೇಲೂರು ಪಟ್ಟಣದ ಹೊರವಲಯದ ಖಾಸಗಿ ಶಾಲೆಯೊಂದರಲ್ಲಿ ನಡೆದಿದ್ದು, ಬೆಳಿಗ್ಗೆ ಟ್ಯೂಶನ್ ಅಥವಾ ಸ್ಪೆಶಲ್ ಕ್ಲಾಸ್ ಎಂದು ಪೋಷಕರಿಗೆ ನಂಬಿಸಿ ಹೋಗುವ ವಿದ್ಯಾರ್ಥಿ ವಿದ್ಯಾರ್ಥಿನಿಯರು ಶಾಲೆಯ ಹಿಂಭಾಗದಲ್ಲಿ ಮೈಮರೆತು ಸರಸ ಸಲ್ಲಾಪದಲ್ಲಿ ತೊಡಗುವುದು ಎಷ್ಟು ಸರಿ ಎಂದು ಫೇಸ್ ಬುಕ್ ಹಾಗೂ ವಾಟ್ಸಾಪ್‍ಗಳಲ್ಲಿ ಪೋಸ್ಟ್ ಹರಿದಾಡುತ್ತಿದ್ದು, ಇದರಿಂದ ಶಾಲೆಯ ಶಿಕ್ಷಕರು ಹಾಗೂ ಪೋಷಕರು ತಲೆತಗ್ಗಿಸುವಂತಾಗಿದ್ದು, ಸಾಮಾಜಿಕ ಜಾಲತಾಣದಲ್ಲೂ ಆಕ್ರೋಶ ವ್ಯಕ್ತವಾಗಿದೆ.










