ಬ್ರಿಟನ್‌ನ ರಾಜ ಕಿಂಗ್ ಚಾರ್ಲ್ಸ್ III ಎಂದು ಅಧಿಕೃತ ಘೋಷಣೆ…

52
firstsuddi

ಲಂಡನ್ : ಬ್ರಿಟಿಷ್ ಇತಿಹಾಸದಲ್ಲೇ ಸುದೀರ್ಘಾವಧಿಗೆ ರಾಣಿಯಾಗಿದ್ದ 2ನೇ ಎಲಿಜಬೆತ್(96) ತೀವ್ರ ಅನಾರೋಗ್ಯದಿಂದ ಗುರುವಾರ ರಾತ್ರಿ ನಿಧನರಾಗಿದ್ದಾರೆ. ಇದರ ಬೆನ್ನಲ್ಲೇ ಇದೀಗ ರಾಣಿ 2ನೇ ಎಲಿಜಬೆತ್ ಅವರ ಹಿರಿಯ ಪುತ್ರ ಕಿಂಗ್ ಚಾರ್ಲ್ಸ್ III ಅವರನ್ನು ಅಧಿಕೃತವಾಗಿ ಬ್ರಿಟನ್ ನ ರಾಜ ಎಂದು ಇಂದು ಘೋಷಿಸಲಾಗಿದೆ.

ಲಂಡನ್ ನ ಸೇಂಟ್ ಜೇಮ್ಸ್ ಅರಮನೆಯಲ್ಲಿ ಇಂದು ಅವರನ್ನು ಅಧಿಕೃತವಾಗಿ ಬ್ರಿಟನ್ ನ ರಾಜ ಎಂದು ಘೋಷಿಸಲಾಯಿತು. ಕಿಂಗ್ ಚಾರ್ಲ್ಸ್ ಅವರ ಪತ್ನಿ ಕ್ವೀನ್ ಕಾನ್ಸಾರ್ಟ್ ಕ್ಯಾಮಿಲ್ಲಾ ಮತ್ತು ಅವರ ಮಗ ಮತ್ತು ನೂತನ ರಾಜನ ಉತ್ತರಾಧಿಕಾರಿ ಪ್ರಿನ್ಸ್ ವಿಲಿಯಂ, ವೇಲ್ಸ್ ನ ಹೊಸ ರಾಜಕುಮಾರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ನಿನ್ನೆ ರಾಜನಾಗಿ ತಮ್ಮ ಮೊದಲ ದೂರದರ್ಶನ ಭಾಷಣದಲ್ಲಿ ಮಾತನಾಡಿದ ಕಿಂಗ್ ಚಾರ್ಲ್ಸ್, ಥ್ಯಾಂಕ್ಯೂ ಮೈ ಡಾರ್ಲಿಂಗ್ ಮಮಾ. ನಿಮ್ಮ ಪ್ರೀತಿಯ ವಾತ್ಸಲ್ಯ, ಮಾರ್ಗದರ್ಶನಕ್ಕೆ ಧನ್ಯವಾದ. ನಿಮ್ಮ ಜೀವಮಾನವಿಡಿ ಜನರ, ದೇಶದ ಸೇವೆ ಮಾಡಿದ್ದು, ನಾನು ನಿಮ್ಮ ರೀತಿಯಲ್ಲೇ ಜನರ ಸೇವೆ ಮಾಡುವೆ. ನನ್ನ ಪ್ರೀತಿಯ ತಾಯಿ, ಅಗಲಿರುವ ತಂದೆಯನ್ನ ಸೇರಲು ಕೊನೆಯ ಪ್ರಯಾಣ ಆರಂಭಿಸಿದಾಗ ನಾ ಹೇಳ ಬಯಸುವುದು ಇಷ್ಟೇ. ನಮ್ಮ ಕುಟುಂಬ ಹಾಗೂ ರಾಷ್ಟ್ರಕ್ಕಾಗಿ ನೀವು ಸಲ್ಲಿಸಿದ ಸೇವೆ ಹಾಗೂ ಪ್ರೀತಿಗೆ ಧನ್ಯವಾದಗಳು. ಇಷ್ಟು ವರ್ಷ ಶ್ರದ್ಧೆಯಿಂದ ಕೆಲಸ ಮಾಡಿದ್ದೀರಿ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಎಂದಿದ್ದಾರೆ.