ಭಾರತೀಯ ನೌಕಾಪಡೆಯ ಮೊದಲ ಮಹಿಳಾ ಪೈಲಟ್ ಆಗಿ ಲೆಫ್ಟಿನೆಂಟ್ ಶಿವಾಂಗಿ ಅವರು ನೇಮಕ…

487
firstsuddi

ಕೊಚ್ಚಿ : ಭಾರತೀಯ ನೌಕಾಪಡೆಯ ಮೊದಲ ಮಹಿಳಾ ಪೈಲಟ್ ಆಗಿ ಉಪ ಲೆಫ್ಟಿನೆಂಟ್ ಶಿವಾಂಗಿ ಅವರು ನೇಮಕವಾಗುವ ಮೂಲಕ ಭಾರತೀಯ ನೌಕಾಪಡೆಯ ಮೊದಲ ಮಹಿಳಾ ಪೈಲಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಬಿಹಾರದ ಮುಜಫರ್ ಪುರ್ ನಗರದಲ್ಲಿ ಜನಿಸಿದ ಶಿವಾಂಗಿ ಅವರನ್ನು ಪ್ರಾಥಮಿಕ ತರಬೇತಿ ಬಳಿಕ 2018ರಲ್ಲಿ ಭಾರತೀಯ ನೌಕಾಪಡೆಗೆ ಆಯ್ಕೆ ಮಾಡಲಾಗಿತ್ತು. ಇಂದು ಶಿವಾಂಗಿ ಅವರು ಕೊಚ್ಚಿಯ ನೌಕಾ ನೆಲೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದು, ಭಾರತೀಯ ನೌಕಾಪಡೆಯ ಡಾರ್ನಿಯರ್ ಕಣ್ಗಾವಲು ವಿಮಾನವನ್ನು ಹಾರಿಸಲಿದ್ದಾರೆ.