ನವದೆಹಲಿ : ಭಾರತೀಯ ಭೂ ಸೇನಾಪಡೆಯ ನೂತನ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಮನೋಜ್ ಮುಕುಂದ್ ನಾರಾವಾನೆ ಅವರು ಅಧಿಕಾರ ಸ್ವೀಕರಿಸಿದ್ದಾರೆ. ಭೂ ಸೇನಾ ಮುಖ್ಯಸ್ಥರಾಗಿದ್ದ ಜನರಲ್ ಬಿಪಿನ್ ರಾವತ್ ಅವರನ್ನು ಕೇಂದ್ರ ಸರ್ಕಾರ ಸಿಡಿಎಸ್ (ಚೀಫ್ ಆಫ್ ಡಿಫೆನ್ಸ್ ಸ್ಟಾಫ್) ನ ಮುಖ್ಯಸ್ಥರಾಗಿ ಆಯ್ಕೆ ಮಾಡಿದ್ದರಿಂದ ತೆರವಾಗಿದ್ದ ಭೂ ಸೇನಾ ಮುಖ್ಯಸ್ಥ ಸ್ಥಾನಕ್ಕೆ ಮನೋಜ್ ಮುಕುಂದ್ ನಾರವಾನೆ ಅವರು ನೇಮಕವಾಗಿದ್ದಾರೆ. 37 ವರ್ಷ ಸೇನೆಯಲ್ಲಿ ಅನುಭವ ಹೊಂದಿರುವ ಮುಕುಂದ್ ಅವರು ಈ ಅವಧಿಯಲ್ಲಿ ಈಶಾನ್ಯ ರಾಜ್ಯ, ಕಾಶ್ಮೀರ ಹಾಗೂ ಚೀನಾ ಗಡಿಗಳಲ್ಲಿ ಕಾರ್ಯ ನಿರ್ವಹಿಸಿದ್ದು, ಈಸ್ಟರ್ನ್ ಕಮಾಂಡ್‍ನ ಮುಖ್ಯಸ್ಥರಾಗಿದ್ದರು. ಅಲ್ಲದೇ ಜಮ್ಮು ಕಾಶ್ಮೀರದಲ್ಲಿ ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ನಿರತವಾಗಿರುವ ರೈಫಲ್ಸ್ ಬೆಟಾಲಿಯನ್‍ನಲ್ಲಿ ಕಮಾಂಡರ್ ಆಗಿಯೂ ಕಾರ್ಯ ನಿರ್ವಹಿಸಿದ್ದರು.










