ಭಾರತ ಶೀಘ್ರದಲ್ಲೇ ಜಗತ್ತಿನ ಮೂರನೇ ಅತಿದೊಡ್ಡ ಆರ್ಥಿಕ ದೇಶವಾಗಲಿದೆ: ರಾಷ್ಟ್ರಪತಿ ಮುರ್ಮು.

17

ನವದೆಹಲಿ: ಭಾರತ ಜಗತ್ತಿನ 3ನೇ ಅತಿದೊಡ್ಡ ಆರ್ಥಿಕ ದೇಶವಾಗಲಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮ ಇಂದು ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ತಿಳಿಸಿದರು. ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಹೆಚ್ಚಿಸಲು ಸರ್ಕಾರ, ವೇಗವಾಗಿ ಪ್ರಮುಖ ನಿರ್ಧಾರಗಳನ್ನು ಜಾರಿಗೊಳಿಸುತ್ತಿದೆ ಎಂದು ಹೇಳಿದರು. ಸರ್ಕಾರ ರೈತರಿಗೆ ಬೆಂಬಲ ನೀಡಲು ಬದ್ದವಾಗಿದೆ. ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ರೂ. 41 ಸಾವಿರ ಕೋಟಿಯನ್ನು ಲಕ್ಷಾಂತರ ರೈತರಿಗೆ ವಿತರಿಸಲಾಗಿದೆ. ಈ ಉಪಕ್ರಮ ರೈತರಿಗೆ ಆರ್ಥಿಕವಾಗಿ ನೆರವಾಗುವ ಜೊತೆಗೆ ಕೃಷಿಯಲ್ಲಿ ಸ್ಥಿರತೆ ಮತ್ತು ಗ್ರಾಮೀಣ ಆರ್ಥಿಕತೆಯ ಬೆಳವಣಿಗೆಗೆ ಭರವಸೆ ನೀಡಲಿದೆ ಎಂದು ತಿಳಿಸಿದರು. ಇದೇ ವೇಳೆ, ಕೇಂದ್ರದ ಹಲವು ಪ್ರಮುಖ ನೀತಿ, ಸುಧಾರಣೆಗಳನ್ನು ಉಲ್ಲೇಖಿಸಿದ ಅವರು, ಒಂದು ದೇಶ, ಒಂದು ಚುನಾವಣೆ ದೇಶದೆಲ್ಲೆಡೆ ಚುನಾವಣೆಯನ್ನು ಸಮ್ಮಿಳಿತಗೊಳಿಸಲಿದೆ. ವಕ್ಫ್ ಮಸೂದೆಯು ವಕ್ಫ್ ಆಸ್ತಿ ನಿರ್ವಹಣೆಯಲ್ಲಿ ಪಾರದರ್ಶಕತೆಯನ್ನು ಪರಿಚಯಿಸಲಿದೆ ಎಂದು ತಿಳಿಸಿದರು.