ಹುಬ್ಬಳ್ಳಿ : ಭಿಕ್ಷುಕನಿಗೆ ವಿದ್ಯಾರ್ಥಿಯೊಬ್ಬ ತೂಕದ ಯಂತ್ರ ಕೊಡಿಸಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಹಾಯ ಮಾಡುವ ಮೂಲಕ ಹೊಸ ಜೀವನ ನೀಡಿದ ಅಪರೂಪದ ಘಟನೆಯೊಂದು ನಗರದಲ್ಲಿ ನಡೆದಿದೆ.
ಶಿರಸಿ ಮೂಲದ ಗಂಗಾಧರಪ್ಪ ಎಂಬುವವರು ವಿಕಲಚೇತನಾಗಿದ್ದು, ಪ್ರತಿನಿತ್ಯ ಭಿಕ್ಷೆ ಬೇಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಇದನ್ನು ಅರಿತ ಸುನೀಲ್ ಜಂಗಾನಿ ಎಂಬ ವಿದ್ಯಾರ್ಥಿ ಭಿಕ್ಷೆ ಬೇಡಿಕೊಂಡು ಅಲೆಯುತ್ತಿದ್ದ ಭೀಕ್ಷುಕನಿಗೆ ತೂಕದ ಯಂತ್ರ ನೀಡಿ, ಸ್ವಾವಲಂಬಿ ಬದುಕು ಕಟ್ಟಿಕೊಡುವ ಮೂಲಕ ಹಲವರಿಗೆ ಮಾದರಿಯಾಗಿದ್ದಾರೆ.
ಕಟಿಂಗ್ ಮಾಡಿಸಿ, ಎರಡು ಜೊತೆ ಹೊಸ ಬಟ್ಟೆ ಕೊಟ್ಟು, ಅವರಿಗೆ ಹೊಸ ರೂಪ ನೀಡಿದ್ದಾರೆ. ಅವರಿಗೆ ತೂಕದ ಯಂತ್ರ ಕೊಡಿಸಿ ಭಿಕ್ಷೆ ಬೇಡುವ ಬದಲು ಅದರಿಂದ ಬರುವ ಹಣದಿಂದ ಜೀವನ ನಿರ್ವಹಣೆ ಮಾಡಲು ತಿಳಿಸಿದ್ದಾರೆ. ಭಿಕ್ಷುಕನೊಬ್ಬರ ಸ್ವಾವಲಂಬಿ ಬದುಕಿಗೆ ಬೆಳಕಾಗಿದ್ದು, ಜನರಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ.










