ಭೀಕರ ಭೂಕಂಪದಿಂದ ತತ್ತರಿಸಿರುವ ಆಫ್ಘಾನ್‍ಗೆ ಭಾರತ ನೆರವು…

55
firstsuddi

ಕಾಬೂಲ್ : ಭೀಕರವಾದ ಭೂಕಂಪದಿಂದ ತತ್ತರಿಸಿರುವ ಅಫ್ಘಾನಿಸ್ತಾನಕ್ಕೆ ಭಾರತ ನೆರವಿನ ಹಸ್ತ ಚಾಚಿದೆ. ಮಾನವೀಯ ನೆಲೆಗಟ್ಟಿನಲ್ಲಿ ಭಾರತವು ತುರ್ತು ಪರಿಹಾರ ನೆರವು ಮತ್ತು ತಾಂತ್ರಿಕ ತಂಡವನ್ನು ಅಫ್ಘಾನಿಸ್ತಾನಕ್ಕೆ ಕಳುಹಿಸಿದೆ.

ಆಫ್ಘಾನಿಸ್ತಾನದ ಪೂರ್ವ ಪಕ್ಟಿಕಾ ಪ್ರಾಂತ್ಯದಲ್ಲಿ ಬುಧವಾರ ಪ್ರಬಲ ಭೂಕಂಪ ಸಂಭವಿಸಿ ಸುಮಾರು 1,000 ಜನರು ಸಾವನ್ನಪ್ಪಿದ್ದಾರೆ ಮತ್ತು 1,500ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಜೂನ್ 22ರಂದು ಎರಡು ವಿಮಾನಗಳಲ್ಲಿ 27 ಟನ್ ತುರ್ತು ಪರಿಹಾರ ಸಹಾಯವನ್ನು ರವಾನಿಸಿದೆ ಎಂದು ಎಂಇಎ ತಿಳಿಸಿದೆ.

ರಿಡ್ಜ್ ಟೆಂಟ್ ಗಳು, ಸ್ಲೀಪಿಂಗ್ ಬ್ಯಾಗ್ ಗಳು, ಹೊದಿಕೆಗಳು, ಮಲಗುವ ಚಾಪೆಗಳು ಇತ್ಯಾದಿ ಸೇರಿದಂತೆ ಅಗತ್ಯ ವಸ್ತುಗಳನ್ನು ಒಳಗೊಂಡಿದೆ. ಇವನ್ನು ಮಾನವೀಯ ವ್ಯವಹಾರಗಳ ಸಮನ್ವಯದ ವಿಶ್ವಸಂಸ್ಥೆಯ ಕಚೇರಿ (UNOCHA) ಮತ್ತು ಆಫ್ಘಾನ್ ರೆಡ್ ಕ್ರೆಸೆಂಟ್ ಸೊಸೈಟಿ (ARCS)ಗೆ ಹಸ್ತಾಂತರಿಸಲಾಗುವುದು ಎಂದು ಎಂಇಎ ಹೇಳಿಕೆ ನೀಡಿದೆ.

ನಾವು ಆಫ್ಘಾನಿಸ್ತಾನದ ಜನರ ದುಃಖವನ್ನು ಹಂಚಿಕೊಳ್ಳುತ್ತೇವೆ. ಈ ಅಗತ್ಯದ ಸಮಯದಲ್ಲಿ ನೆರವು ಮತ್ತು ಬೆಂಬಲವನ್ನು ನೀಡಲು ಬದ್ಧರಾಗಿದ್ದೇವೆ ಎಂದು ಎಂಇಎ ವಕ್ತಾರ ಅರಿಂದಮ್ ಬಾಗ್ಚಿ ಟ್ವೀಟ್ ಮಾಡಿದ್ದಾರೆ.