ಭೋಪಾಲ್(ಮಧ್ಯಪ್ರದೇಶ): ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರ ಹೇಳಿಕೆಯೊಂದು ತೀವ್ರ ವಿವಾದಕ್ಕೆ ಕಾರಣವಾಗಿದೆ.
ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ನಾನು ಭೋಪಾಲ್ ನಲ್ಲಿ ಬೆಳೆದಿದ್ದೇನೆ. ಭೋಪಾಲ್ ಜನರು ವಿಭಿನ್ನ ಶೈಲಿಯ ಬದುಕನ್ನು ಹೊಂದಿದ್ದಾರೆ. ಅದನ್ನು ನಿಮಗೆ ನಾನು ಯಾವಾಗಲಾದರೂ, ಖಾಸಗಿಯಾಗಿ ವಿವರಿಸುತ್ತೇನೆ. ಯಾರಿಗಾದರೂ ಕೇಳಿ, ಭೋಪಾಲಿ ಎಂದರೆ, ಸಲಿಂಗಕಾಮಿ ಎಂದರ್ಥ. ನೀವು ಬೇಕಾದರೆ ಯಾವುದೇ ಭೋಪಾಲಿಯನ್ನು ಕೇಳಬಹುದು ಎಂದಿದ್ದರು. ಈ ಹೇಳಿಕೆ ಮಧ್ಯಪ್ರದೇಶದ ಜನರಿಗೆ ಮಾಡಿರುವ ಅವಮಾನ ಎಂದಿರುವ ಕಾಂಗ್ರೆಸ್, ಕ್ಷಮೆಯಾಚಿಸುವಂತೆ ಆಗ್ರಹಿಸಿದೆ.










